ಚಿಕ್ಕಮಗಳೂರು: ಭಾರತವು ವಿಶ್ವ ಪ್ರಸಿದ್ಧ ತಾಣವಾಗಲು ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ವಿವಿಧ ಮಂದಿರಗಳಲ್ಲಿ ತನ್ನದೇ ಶೈಲಿಯ ಶಿಲ್ಪಕಲೆಯ ಮೂಲಕ ಇಡೀ ಪ್ರಪಂಚವನ್ನೇ ದೇಶದತ್ತ ತಿರುಗಿ ನೋಡುವಂತೆ ಮಾಡಿರುವ ವಿಶ್ವಕರ್ಮರ ಸೇವೆ ಅನನ್ಯ ಎಂದು ಮಾಜಿ ಸಚಿವ ಸಿ.ಟಿ.ರವಿ ಶ್ಲಾಘಿಸಿದರು.
ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾಸಭಾದಿಂದ ನಗರದ ಜಿಲ್ಲಾ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಮಹಾಯಜ್ಞ, ಸಾಮೂಹಿಕ ಉಪನಯನ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶ ಹಾಗೂ ನಾಡಿನ ಬಹುತೇಕ ಎಲ್ಲ ದೇವಾಲಯಗಳಲ್ಲಿ ವಿಶ್ವಕರ್ಮರು ಶಿಲ್ಪಕಲೆಯ ಕೆತ್ತನೆ ಮೂಲಕ ಮನ್ನಣೆ ಗಳಿಸಿದ್ದಾರೆ. ಬೇಲೂರು, ಹಳೇಬೀಡು ಸೇರಿದಂತೆ ಇತರೆ ದೇಗುಲಗಳಲ್ಲಿ ಅನಾದಿಕಾಲದಲ್ಲೇ ಯಾವುದೇ ತಂತ್ರಗಾರಿಕೆಯಿಲ್ಲದೇ ಕೇವಲ ಬುದ್ದಿಶಕ್ತಿಯಿಂದಲೇ ಸಾಧಾರಣ ಕಲ್ಲಿಗೆ ವಿಶಿಷ್ಟ ರೂಪ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್ ಆಚಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು ೪೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವಕರ್ಮರು ಪ್ರಸ್ತುತ ಹಿಂದುಳಿದ ವರ್ಗವಾಗಿದೆ. ಸಾಮಾಜಿಕ ಹಾಗೂ ರಾಜಕೀಯವಾಗಿ ವಿಧಾನಸಭಾ ಅಥವಾ ನಿಗಮ ಮಂಡಳಿಗಳಲ್ಲಿ ಸ್ಥಾನ ದೊರೆಯದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಕಳೆದ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸುವ ಜೊತೆಗೆ ವಿಶ್ವಕರ್ಮ ಜಯಂತಿಗೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿಯೂ ಮುಜರಾಯಿ ಇಲಾಖೆಯಡಿಯ ದೇವಾಲಯಗಳಲ್ಲಿ ವಿಶ್ವಕರ್ಮ ಸಮಾಜದ ಓರ್ವರನ್ನು ನಾಮ ನಿರ್ದೇಶನ ಮಾಡಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯಸರ್ಕಾರ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜವನ್ನು ಸಮಾಜದ ಮುಂಚೂಣಿಗೆ ತರುಲು ಶ್ರಮಿಸಬೇಕು. ಸಮುದಾಯ ಏಳಿಗೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಪ್ರಸ್ತುತ ಜನಾಂಗದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್.ಆರ್.ಉಮಾಶಂಕರ್, ಕುಲಕಸುಬಿನ ಮೂಲಕ ದೇಶದ ಶ್ರೇಷ್ಟತೆಯನ್ನು ವಿಶ್ವಮಟ್ಟದಲ್ಲಿ ಸಾರಿದವರು ವಿಶ್ವಕರ್ಮರು. ಸಮಾಜಕ್ಕೆ ತನ್ನದೇ ಆದ ಹಿರಿಮೆಯಿದೆ. ಸಮಾಜದಲ್ಲಿ ಏಕತೆ ಭಾವವಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವುದು ವಿಶ್ವಕರ್ಮ ಸಮಾಜ ಎಂದು ತಿಳಿಸಿದರು.
ಚಿತ್ರಕಲಾ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಪಿ.ಜಯಣ್ಣಾಚಾರ್ ಅವರಿಗೆ ಇದೇ ವೇಳೆ ಸನ್ಮಾನಿಸಲಾಯಿತು. ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಳಿಕ ೫ ಮಂದಿ ಯುವಕರಿಗೆ ಸಾಮೂಹಿಕ ಉಪನಯನ ನಡೆಸಲಾಯಿತು.
ಇದೇ ವೇಳೆ ಸೇವಾಸಭಾದ ಚಿಕ್ಕಮಗಳೂರು ತಾಲೂಕು ನೂತನ ಅಧ್ಯಕ್ಷರಾಗಿ ಕೆ.ಪಿ.ದಿವಾಕರ, ಗೌರವ ಅಧ್ಯಕ್ಷ ಕೆ.ಎನ್.ಜಗನ್ನಾಥ್, ಉಪಾಧ್ಯಕ್ಷರಾಗಿ ಲಕ್ಷö್ಮಣಾಚಾರ್, ಎ.ಟಿ.ಮಹೇಶ್, ಎಸ್.ವಿ.ಹರೀಶ್ ಆಚಾರ್ಯ, ಕಾರ್ಯದರ್ಶಿ ನಾಗಭೂಷಣಾಚಾರ್, ಖಜಾಂಚಿ ಬಿ.ಎಂ.ಇAದ್ರೇಶ್, ಸಹ ಕಾರ್ಯದರ್ಶಿ ಅರುಣ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಡಿ.ದಿನೇಶ್, ಸಂತೋಷ್, ಮಂಜಾಚಾರ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾಸಭಾದ ಗೌರವಾಧ್ಯಕ್ಷ ಎಂ.ಎನ್.ವಿಠಲಾಚಾರ್ಯ, ಉಪಾಧ್ಯಕ್ಷ ಎಂ.ಜೆ.ಚAದ್ರಶೇಖರ್, ಕಾರ್ಯದರ್ಶಿ ಬಿ.ಪಿ.ರತೀಶ್, ಖಜಾಂಚಿ ಬಿ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿಗಳಾದ ಎಚ್.ನಾರಾಯಣಚಾರ್, ಸಿ.ಎಸ್.ಅರುಣ್, ನಿರ್ದೇಶಕರಾದ ಎಂ.ಜೆ.ಮಹೇಶ್ ಆಚಾರ್ಯ, ರುದ್ರಯ್ಯಚಾರ್, ಕೆ.ರಾಮಪ್ಪಚಾರ್ ಮತ್ತಿತರರಿದ್ದರು.