ಜಿಲ್ಲೆ

ಬೆಂಬಲಿಸಿದ ಎಲ್ಲರಿಗೂ ಚಿರಋಣಿ

ಎಂ.ಕೆ.ಹುಬ್ಬಳ್ಳಿ: ಬಿಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನನಗೆ ಹೆಚ್ಚಿನ ಮತ ನೀಡಿ ಬೆಂಬಲಿಸಿದ, ಪಿಕೆಪಿಎಸ್​ಗಳ ಆಡಳಿತ ಮಂಡಳಿಗಳ ಸಹಕಾರ ನಾನು ಎಂದಿಗೂ ಮರೆಯಲಾರೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ, ನಾನಾಸಾಹೇಬ ಪಾಟೀಲ ಹೇಳಿದರು.

ಸಮೀಪದ ಹೊಸಕಾದರವಳ್ಳಿಯ ಪಕ್ಕದೇಶಿ ಫಾಮ್​ರ್ಹೌಸ್​ನಲ್ಲಿ ಸೋಮವಾರ ಅಭಿಮಾನಿಗಳು, ಮುಖಂಡರು ಮತ್ತು ಕಾರ್ಯಕರ್ತರು ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ನಿರ್ದೇಶಕ ಸ್ಥಾನದ ಆಯ್ಕೆಗೆ ತಾಲೂಕಿನ ಪಿಕೆಪಿಎಸ್​ಗಳು ಪಾತೀತವಾಗಿ ಸಹಕರಿಸಿದ್ದಾರೆ. ಪಿಕೆಪಿಎಸ್​ಗಳ ಅಭಿವದ್ಧಿ ಜತೆಗೆ ರೆತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಗುರಿ ನನ್ನದು ಎಂದರು.

ನಿವತ್ತ ಪ್ರಾಚಾರ್ಯ ಗಂಗಾಧರ ಕೋಟಗಿ ಅಧ್ಯತೆ ವಹಿಸಿದ್ದರು. ಜಗದೀಶ್ವರಯ್ಯ ಚರಂತಿಮಠ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್​ ಬ್ಲಾಕ್​ ಅಧ್ಯ ಸಂಗನಗೌಡ ಪಾಟೀಲ, ಶಿವಯೋಗಿಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸಣ್ಣಪ್ಪ ರಾಮರಾವ, ಸಾಗರ ದೇಸಾಯಿ, ಉಮೇಶ ಕೋಟಗಿ, ಶ್ರೀಕಾಂತ ಹಣಬರಟ್ಟಿ, ಗಂಗಪ್ಪ ಧರೆಣ್ಣವರ, ಚಂದ್ರಯ್ಯ ವಣ್ಣೂರ ಇತರರಿದ್ದರು.