ಜಿಲ್ಲೆ

ಋತುಚಕ್ರ ತಪಾಸಣೆ ವಿವಾದದ ಬಳಿಕ ಶಹಪುರ ಖಾಸಗಿ ಶಾಲೆ ಪುನಾರಂಭ: ಸಿಬ್ಬಂದಿ ಮೇಲೆ ಹದ್ದಿನ ಕಣ್ಣು,Shahapur

Shahapur:ವಿದ್ಯಾರ್ಥಿನಿಯರ ಋತುಚಕ್ರ ತಪಾಸಣೆ ವಿವಾದ ಬೆಳಕಿಗೆ ಬಂದ ಬಳಿಕ ಭಾರಿ ಸುದ್ದಿಯಾಗಿದ್ದ ಯಾದಗಿರಿಯ ಶಹಪುರ ಖಾಸಗಿ ಶಾಲೆ ಮಂಗಳವಾರ (ಜುಲೈ 15) ಪುನಾರಂಭವಾಗಿದೆ.

ಪ್ರಸ್ತುತ ಶಾಲೆಯ ಉಳಿದ ಸಿಬ್ಬಂದಿ ವರ್ಗ, ಶಹಪುರದ ಶಿಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಎಂದಿನಂತೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ ಎಂದು ಜಿಲ್ಲಾಪರಿಷತ್​ನ ಶಿಕ್ಷಣ ಸಂಸ್ಥೆಯ ಅಧಿಕಾರಿ ಬಾಲಸಾಹೇಬ್​ ರಕ್ಷೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೆ, ಈ ಹಿಂದೆ ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರೆಯೇ ಎಂದು ತಿಳಿಯಲು 12 ವಿದ್ಯಾರ್ಥಿನಿಯರನ್ನು ಬಟ್ಟೆ ಬಿಚ್ಚಿ ಪರೀಕ್ಷೆ ನಡೆಸಿರುವ ಆರೋಪ ಕೇಳಿಬಂದಿತ್ತು. ಇದೇ ಆರೋಪದ ಮೇಲೆ ಶಾಲೆಯ ಮುಖ್ಯೋಪಾಧ್ಯಾಯ, ಮೂವರು ಶಿಕ್ಷಕರು ಹಾಗೂ ಮಹಿಳಾ ಸಹಾಯಕಿಯನ್ನು ಶಹಪುರ ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬಳಿಕ ಜುಲೈ 9 ರಂದು ಶಾಲೆಯನ್ನು ಬಂದ್​ ಮಾಡಲಾಗಿತ್ತು.

ನಡೆದಿದ್ದೇನು?

ಜುಲೈ 8 ರಂದು ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದವು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ಮೇರೆಗೆ ಯಾರು ಮುಟ್ಟಾಗಿದ್ದಾರೆ ಎಂದು ಪರೀಕ್ಷಿಸಲು 12 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿ ಪರೀಕ್ಷಿಸಲಾಗಿತ್ತು. ಬಳಿಕ ಈ ವಿಚಾರ ಗೊತ್ತಾಗಿ ವಿವಾದವೇ ಸೃಷ್ಟಿಯಾಗಿತ್ತು. ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲೆಯ ಸಿಬ್ಬಂದಿಯನ್ನು ಬಂಧಿಸಿ, ಶಾಲೆಯನ್ನು ಬಂದ್​ ಮಾಡಲಾಗಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಶಾಲೆ ಮತ್ತೆ ಪುನಾರಂಭವಾಗಿದೆ. (ಏಜೆನ್ಸೀಸ್​)