ಜಿಲ್ಲೆ

ಠಾಣೆ ಕೇರ್ ಆಫ್ ಶ್ರೀರಾಂಪುರ 30ರಂದು ತೆರೆಗೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಠಾಣೆ ಕೇರ್ ಆಫ್ ಶ್ರೀರಾಂಪುರ ಚಲನಚಿತ್ರ ಮೇ 30ರಂದು ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಾಯಕ ನಟ ಪ್ರವೀಣ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗತ್ ರಾಜ್ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಎರಡು ಹಾಡುಗಳಿವೆ. ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಇದನ್ನು ಆಧರಿಸಿ ಚಿತ್ರಕತೆ ಹೆಣೆಯಲಾಗಿದೆ ಎಂದರು.

ಶ್ರೀರಾಂಪುರ, ಬನಶಂಕರಿ, ಹಳೇಗುಡ್ದದ ಹಳ್ಳಿ ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹರಿಣಾಕ್ಷಿ ರಾವ್ ಚಿತ್ರದ ನಾಯಕಿಯಾಗಿದ್ದು, ಬಲರಾಜವಾಡಿ, ರೋಹಿತ್, ನಾಗೇಶ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಮಾನಸಾ ಹೊಳ್ಳ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಾಯತ್ರಿ ಎಂ. ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ವಪಕಿ ಗಾಯತ್ರಿ ಎಂ., ದರ್ಶನ್ ಇದ್ದರು.