02 ಹನೂರು 2 ಹನೂರು ತಾಲೂಕಿನ ಕೆಂಪಯ್ಯನಕಟ್ಟಿ ಗ್ರಾಮದಲ್ಲಿ ಮಾರಿಹಬ್ಬದ ಪ್ರಯುಕ್ತ ಅಂಗಾಳ ಪರಮೇಶ್ವರಿ ದೇಗುಲಕ್ಕೆ ಮಹಿಳೆಯರು ಮೆರವಣಿಗೆ ಮೂಲಕ ತಂಪುಜ್ಯೋತಿ ಹೊತ್ತು ತಂದರು. 
ಜಿಲ್ಲೆ

ಅಂಗಾಳ ಪರಮೇಶ್ವರಿಗೆ ತಂಪುಜ್ಯೋತಿ ಪೂಜೆ

ಹನೂರು: ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಮಾರಿಹಬ್ಬದ ಪ್ರಯುಕ್ತ ಬುಧವಾರ ಭಕ್ತರು ಅಂಗಾಳ ಪರಮೇಶ್ವರಿ ದೇಗುಲಕ್ಕೆ ತಂಪುಜ್ಯೋತಿ ಪೂಜೆ ಅರ್ಪಿಸಿದರು.

ಬೆಳಗ್ಗೆ ದೇಗುಲದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮುಖ್ಯರಸ್ತೆಯ ಬದಿಯಲ್ಲಿರುವ ಮಾರಮ್ಮನ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ವಿವಿಧ ಬಡಾವಣೆಯಿಂದ ತಂಪುಜ್ಯೋತಿಯನ್ನು ಹೊತ್ತು ತಂದಿದ್ದ ಮಹಿಳೆಯರನ್ನು ಅರ್ಚಕರ ನೇತೃತ್ವದಲ್ಲಿ ಮೆರವಣಿಗೆ ಮೂಲಕ ದೇಗುಲಕ್ಕೆ ಕರೆ ತರಲಾಯಿತು. ತಂಪುಜ್ಯೋತಿಯನ್ನು ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.