ಜಿಲ್ಲೆ

ಭಯೋತ್ಪಾದಕ ದಾಳಿ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಪಾಠ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ಪಹಲ್ಗಾಮ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್​ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಇದು ಭಾರತದ ಸಂಕಲ್ಪ ಶಕ್ತಿಗೆ ನಿದರ್ಶನವಾಗಿದ್ದು, ನಮ್ಮ ದೇಶ ಭಯೋತ್ಪಾದನೆ ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ನೇರ ಸಂದೇಶ ರವಾನಿಸಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಹಿರೇಅಂಗ್ರೋಳ್ಳಿ ಗ್ರಾಮದ ವಿಠ್ಠಲ&ರುಕ್ಮಾಯಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಾರಾಯಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭರತ ಭೂಮಿ ಆಧ್ಯಾತ್ಮಿಕ ಮತ್ತು ಸಾಂಸತಿಕ ಪರಂಪರೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತವಾಗಿದೆ. ಯುವಜನರು ಧಾರ್ಮಿಕತೆಯ ಜತೆಗೆ ಉತ್ತಮ ಆರೋಗ್ಯ ಸಂಪತ್ತು ಹೊಂದುವ ಮೂಲಕ ದೇಶಸೇವೆಗೆ ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.

ಬಿಜೆಪಿ ಮಂಡಲ ಅಧ್ಯ ಬಸವರಾಜ ಸಾಣಿಕೊಪ್ಪ ಮಾತನಾಡಿ, ಮಾನಸಿಕ ನೆಮ್ಮದಿಗೆ ಮಹಾತ್ಮರ ವಾಣಿ ಆಲಿಸಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ದೇವಸ್ಥಾನಕ್ಕೆ 50,000 ರೂ. ಮೊತ್ತದ ಕಾಣಿಕೆ ಸಲ್ಲಿಸಿದರು. ಪುಂಡಲೀಕ ಮಹಾರಾಜರು, ಕಲ್ಲಪ್ಪ ಗೌಡಪ್ಪಗೋಳ, ಬಸಪ್ಪ ಗೋಶಾನಟ್ಟಿ, ಮಲ್ಲಪ್ಪ ಮಾರಿಹಾಳ, ರಮೇಶ ಗಡವೀರ, ಗಂಗಾಧರ ಉಳ್ಳೇಗಡ್ಡಿ, ಚೇತನ ಅರಳಿಕಟ್ಟಿ, ವಿಠ್ಠಲ ಗಳಗಿ, ಸಂತೋಷ ಉಳ್ಳಾಗಡ್ಡಿ, ದೊಡ್ಡಪ್ಪ ಭದ್ರಿ, ಕಲ್ಲಪ್ಪ ವಕ್ಕುಂದ, ಸುಧೀರ ಗಡವೀರ ಹಾಗೂ ಇತರರು ಇದ್ದರು.