ಜಿಲ್ಲೆ

ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

Bagalkot

ತೇರದಾಳ: ಕಾಮಗಾರಿಗಳಿಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ಸಿದ್ದು ಸವದಿ ಸೂಚಿಸಿದರು.

ಪಟ್ಟಣದಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಗ್ರಾಮೀಣ ಸೇರಿ ನಗರ ರಸ್ತೆಗಳ ಕಾಮಗಾರಿಗಳು ಭರದಿಂದ ಸಾಗಿದ್ದು, ವಾಹನ ಸಂಚಾರದ ಮೂಲಕ ಉತ್ತಮ ಆರ್ಥಿಕ ಸ್ಥಿತಿಯನ್ನು ತಲುಪಲು ಸಾಧ್ಯ. ಹೀಗಾಗಿ ಮತಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೆ, ತೇರದಾಳದಲ್ಲಿ ಶೌಚಗೃಹ, ಚರಂಡಿ, ಪೈಪ್‌ಲೈನ್ ಸೇರಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಪಟ್ಟಣದ ವಿವಿಧ ವಾರ್ಡ್ ಹಾಗೂ ಪುರಸಭೆ ಆವರಣದಲ್ಲಿ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪೈಪ್‌ಲೈನ್ ಅಳವಡಿಕೆ, ಪುರಸಭೆ ಮತ್ತು ನಗರದಲ್ಲಿ ಇಂಟರ್‌ಲಾಕ್ ಅಳವಡಿಕೆ, ಸಿಸಿ ಚರಂಡಿ ಇನ್ನಿತರ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ/ಪಂಗಡ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಸತಿ ನಿಲಯಗಳಿಗೆ 2019-20ನೇ ಎಸ್‌ಎ್ಸಿ ಅನುದಾನದಲ್ಲಿ ಅಂದಾಜು 4.26 ಲಕ್ಷ ರೂ. ಮೊತ್ತದ ವಾಷಿಂಗ್ ಮಷಿನ್, ಪ್ಯಾನ್, ಟೇಬಲ್, ಚೇರ್, ಗ್ರೀನ್ ಬೋರ್ಡ್ ಸೇರಿ ಹಲವು ವಸ್ತುಗಳನ್ನು ವಸತಿ ನಿಲಯ ಅಧಿಕಾರಿ ವಸಂತ ಹಿರೇಮಠ ಅವರಿಗೆ ಹಸ್ತಾಂತರಿಸಿದರು.

ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಇಂಜಿನಿಯರ್ ಯಲ್ಲಪ್ಪ ಜೋಗಿ, ಎಪಿಎಂಸಿ ಅಧ್ಯಕ್ಷ ವರ್ಧಮಾನ ಕಡಹಟ್ಟಿ, ತೇರದಾಳ ಬಿಜೆಪಿ ಘಟಕದ ಅಧ್ಯಕ್ಷ ಪ್ರಭಾಕರ ಭಾಗಿ ಸೇರಿ ಪಕ್ಷದ ಹಿರಿಯರು, ಪುರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.

EndFragment