ಜಿಲ್ಲೆ

ಉಭಯ ನಾಯಕರ ಜಯಂತಿ ಸಂಭ್ರಮ

ತೇರದಾಳ: ನಗರ ಸೇರಿ ಗ್ರಾಮೀಣ ಭಾಗದ ಶಾಲೆ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀ ಅವರ ಜಯಂತಿ ಆಚರಣೆ ಸರಳವಾಗಿ ನಡೆಯಿತು.

ನಗರದ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಮಹಾತ್ಮಜಿ ಹಾಗೂ ಶಾಸೀಜಿ ಅವರ ಭಾವಚಿತ್ರಕ್ಕೆ ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಪೂಜೆ ಸಲ್ಲಿಸಿದರು. ಗ್ರಾಮಲೆಕ್ಕಾಧಿಕಾರಿ ಪಿ.ಆರ್. ಮಠಪತಿ, ಸಿಬ್ಬಂದಿ ಮಹಾದೇವ ಯಲ್ಲಟ್ಟಿ, ಹಿರಿಯರಾದ ಜಿನ್ನಪ್ಪ ಸವದತ್ತಿ ಇನ್ನಿತರರು ಇದ್ದರು.

ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸರ್.ಎಂ. ವಿಶ್ವೇಶ್ವರಯ್ಯ ಸೈನ್ಸ್ ಕಾಲೇಜು ಮತ್ತು ಸ್ವಾಮಿ ವಿವೇಕಾನಂದ ಸಿಬಿಎಸ್‌ಇ ಶಾಲೆ ಸಂಯುಕ್ತಾಶ್ರಯದಲ್ಲಿ ಪ್ರಾಚಾರ್ಯ ಅಶೋಕ ಸಿದ್ದಾಪುರ ಪೂಜೆ ನೆರವೇರಿಸಿದರು. ಉಪಪ್ರಾಚಾರ್ಯ ಡಿ.ಐ. ಮೋಮಿನ್ ಹಾಗೂ ಸಿಬ್ಬಂದಿ ಇದ್ದರು.

ಅಲ್ಲಮಪ್ರಭು ಗ್ರಾಮೋದ್ಯೋಗ ಕೇಂದ್ರದಲ್ಲಿ ಚೇರ್ಮನ್ ಆರ್.ಪಿ. ಹಿರೇಮಠ, ಹನಗಂಡಿ ಗ್ರಾಪಂನಲ್ಲಿ ಪಿಡಿಒ ಪಿ.ಪಿ. ರಾವಳ, ತಮದಡ್ಡಿ ಗ್ರಾಪಂನಲ್ಲಿ ಕಾರ್ಯದರ್ಶಿ ಕ್ವಾಜಾಸಾಬ ನದಾಫ್, ಹಳಿಂಗಳಿ ಗ್ರಾಪಂನಲ್ಲಿ ಕಾರ್ಯದರ್ಶಿ ಜಿ.ಬಿ. ರಂಗಪ್ಪಗೋಳ ಪೂಜೆ ನೆರವೇರಿಸಿದರು. ಆಡಳಿತ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಹಿರಿಯರು ಇದ್ದರು.

ಸಮೀಪದ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಪಪೂ ಕಾಲೇಜು ಹಾಗೂ ಶಿವಲಿಂಗೇಶ್ವರ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷ ಡಾ.ಎಸ್.ಎನ್. ಸಲಬಣ್ಣವರ ಪೂಜೆ ಸಲ್ಲಿಸಿದರು. ಪ್ರಾಚಾರ್ಯ ಕೆ.ಎಸ್. ವಿಟೇಕರ್, ಆಡಳಿತಮಂಡಳಿಯ ಹಣಮಂತ ಬೆಂಡಿಕಾಯಿ, ಮಗಯ್ಯ ಹಿರೇಮಠ, ಮುತ್ತು ಕಾಪಸಿ, ಜಕ್ಕಪ್ಪ ಜಲಪುರ, ಸುರೇಂದ್ರ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಮಲ್ಲು ಕವಟಗೊಪ್ಪ, ಮುಖ್ಯಗುರು ಸಿದ್ದು ಕಮದಿನ್ನಿ, ಉಪನ್ಯಾಸಕ ಪ್ರಕಾಶ ವಡ್ರಾಳಿ ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು.