ಜಿಲ್ಲೆ

ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ತೇರದಾಳ: ಸಹಕಾರಿ ಕ್ಷೇತ್ರದಲ್ಲಿ ರೈತರಿಗಾಗಿ ವಿವಿಧ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಎಸ್‌ಡಿಎಂ ಟ್ರಸ್ಟ್ ಸಭಾಭವನದಲ್ಲಿ ರತ್ನತ್ರಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಮೊದಲ ಬೆಳೆ ಸಾಲದ ಚೆಕ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಎಸ್‌ಡಿಎಂ ಟ್ರಸ್ಟ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಎಸ್. ದಾನಿಗೊಂಡ, ಸುರೇಶ ಅಕ್ಕಿವಾಟ, ಜಿನ್ನಪ್ಪ ಸವದತ್ತಿ, ಡಾ.ಎಸ್.ಎಲ್, ಕಾಗಿ, ರತ್ನತ್ರಯ ಪಿಕೆಪಿಎಸ್, ರತ್ನತ್ರಯ ಅಲ್ಪಸಂಖ್ಯಾತರ ಸೌಹಾರ್ದ ಸಹಕಾರಿ ಸಂಘದ ಸರ್ವ ಪದಾಧಿಕಾರಿಗಳು ಇದ್ದರು. ಸಿದ್ದು ಹಾವೋಜಿ ನಿರೂಪಿಸಿ, ವಂದಿಸಿದರು.

StartFragment

EndFragment