ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಟೆನಿಸ್ ಸಂಸ್ಧೆ ಆಶ್ರಯದಲ್ಲಿ 10 ಮತ್ತು 12 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗೆ ರಾಜ್ಯಮಟ್ಟದ ಟೆನಿಸ್ ಪಂದ್ಯಾವಳಿಯನ್ನು ಕೊರ್ಟ್ ವೃತ್ತ ಬಳಿಯ ರಾಜ್ಯಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ನ. 30, ಡಿ.1ರಂದು ಆಯೋಜಿಸಲಾಗಿದೆ. ಆಸಕ್ತರು ನ. 29ರೊಳಗೆ ಚೇತನ ಗಂಜಾಳಿ, ಜಿಲ್ಲಾ ಟೆನಿಸ್ ಸಂಸ್ಧೆ, ಕೊರ್ಟ್ ಸರ್ಕಲ್ ಹತ್ತಿರ, ರಾಜಾಧ್ಯಕ್ಷ ಪೆವಿಲಿಯನ್ ವಿಳಾಸದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ಕಾರ್ಯದರ್ಶಿ ಸಂತೋಷ ಶೆಟ್ಟಿ ತಿಳಿಸಿದ್ದಾರೆ.