ಜಿಲ್ಲೆ

ತೆಂಕಪೇಟೆ ಭಜನಾಸಪ್ತಾಹ ಮಂಗಲೋತ್ಸವ

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸನ್ನಿಧಿಯಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ನಡೆದ ಭಜನೆ ಸಪ್ತಾಹ ಸೋಮವಾರ ಸಂಪನ್ನ ಗೊಂಡಿತು.

ಧಾರ್ಮಿಕ ಪೂಜಾ ವಿದಿ ವಿಧಾನಗಳನ್ನು ದೇವಳದ ಅರ್ಚಕ ವಿನಾಯಕ ಭಟ್​ ನಡೆಸಿಕೊಟ್ಟರು. ಭಕ್ತರು ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್​ ಹರಿ ವಿಠಲ್​ ನಾಮ ಪಠಿಸುತ್ತಾ ದೀಪ ಸ್ತಂಭಕ್ಕೆ ಪ್ರದಕ್ಷಣೆ ಗೈದರು. ಶ್ರೀ ದೇವರಿಗೆ ಮಹಾ ಮಂಗಳಾರತಿ ಬೆಳಗಿದ ಬಳಿಕ ಶ್ರೀ ದೇವರ ಜೊತೆ ದೀಪವನ್ನು ದೇವಳದ ಮುಂಭಾಗದಲ್ಲಿರಿಸಿ, ನೂರಾರು ಭಕ್ತರೂ ಭಕ್ತಿಯಿಂದ ಉರುಳು ಸೇವೆ ಹಾಕಿದರು. ನಗರ ಭಜನೆ, ತೆಪ್ಪಂಗಾಯಿ , ಮಾಸರು ಕುಡಿಕೆ ನಡೆಸಿ ಬಳಿಕ ದೇವಾಲದ ಹೊರಾಂಗಣದಲ್ಲಿ ಶ್ರೀ ದೇವರ ಉತ್ಸವ ನಡೆಯಿತು. ಮಹಾ ಪೂಜೆ ನಂತರ ಸಮಾರಾಧನೆ ಯಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು ರಾತ್ರಿ ಮರು ಭಜನೆ ಹಾಗೂ ಮಂಗಲೋತ್ಸವ ನಡೆಯಿತು. ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ತಿರುಪತಿ ಶ್ರೀನಿವಾಸ ವಿಶೇಷ ಅಲಂಕಾರ ಮಾಡಲಾಗಿತ್ತು.

ಅರ್ಚಕರಾದ ದಯಾಘನ್​ ಭಟ್​ , ಗಿರೀಶ್​ ಭಟ್​ , ದೀಪಕ್​ ಭಟ್​ , ಸುರೇಶ ಭಟ್​ , ಲಕ್ಷ್ಮೀನಾರಾಯಣ ಭಟ್​ , ಗುರುಪ್ರಸಾದ್​ ನಾಯಕ್​ , ವಿಠಲ್​ ದಾಸ್​ ನಾಯಕ್​ , ದೇವಳದಆಡಳಿತ ಮೊಕ್ತೇಸರ ಪಿ.ವಿ ಶೆಣೈ , ವಿಶ್ವನಾಥ್​ ಭಟ್​, ನಾರಾಯಣ ಪ್ರಭು , ಕೈಲಾಶನಾಥ್​ ಶೆಣೈ , ಆ ಶೋಕ್​ ಬಾಳಿಗಾ , ದೇವಿದಾಸ್​ ಪೈ , ಉಮೇಶ್​ ಪೈ , ವಸಂತ ಕಿಣೆ , ರೋಹಿತಾಕ್ಷ ಪಡಿಯಾರ್​ , ಪುಂಡಲೀಕ ಕಾಮತ್​, ಗಣೇಶ ಕಿಣಿ , ವಿವೇಕ ಶಾನ್​ ಬೋಗ್​ ,ಸತೀಶ್​ ಕಿಣಿ , ಭಾಸ್ಕರ ಶೆಣೈ , ವಿಶಾಲ್​ ಶೆಣೈ , ಶ್ಯಾಮ್​ ಪ್ರಸಾದ್​ ಕುಡ್ವ , ನಿತೇಶ ಶೆಣೈ , ನಾಗೇಶ್​ ಪ್ರಭು , ಸಂದೀಪ್​ ನಾಯಕ್​ , ಪ್ರದಿಪ್​ ರಾವ್​ , ಸತೀಶ್​ ಕಾಮತ್​ , ಜಯಪ್ರಕಾಶ್​ ಕಿಣಿ ಉಪಸ್ಥಿತರಿದ್ದರು.