ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಒಂದು ತಿಂಗಳ ಕಾಲ ನಡೆದ ಅಹೋರಾತ್ರಿ ಭಜನಾ ಮಹೋತ್ಸವ ಮಂಗಲೋತ್ಸವ ಗುರುವಾರ ಸಂಪನ್ನಗೊಂಡಿತು. ಪ್ರತಿ ಆದಿತ್ಯವಾರ ಸಾಯಂಕಾಲ ನಗರ ಭಜನೆ ಹಾಗೂ ಆಹ್ವಾನಿತ ಪ್ರಸಿದ್ಧ ಕಲಾವಿದರಿಂದ ವಿಶೇಷ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇವಳದ ಪ್ರಧಾನ ಅರ್ಚಕ ದಯಾನ ಭಟ್ ಮಂಗಳಾಚರಣೆಯ ಮಹಾ ಪೂಜೆ ನೆರವೇರಿಸಿದರು. ಆಡಳಿತ ಮೊಕ್ತೇಸರ ಪಿ ವಿ ಶೆಣೈ , ಉಮೇಶ್ ಪೈ , ಮಟ್ಟಾರ್ ವಸಂತ ಕಿಣಿ , ವಿಶ್ವನಾಥ ಭಟ್ , ಪ್ರಕಾಶ್ ಶೆಣೈ , ಅಶೋಕ ಬಾಳಿಗಾ ,ಗಣೇಶ ಕಿಣಿ , ರೋಹಿತಾಕ್ಷ ಪಡಿಯಾರ್ , ಪುಂಡಲೀಕ್ ಕಾಮತ್ , ದೀಪಕ್ ಭಟ್ , ,ಗಿರೀಶ ಭಟ್ , ಭಜನಾ ರೂವಾರಿ ಸತೀಶ್ ಕಿಣಿ , ವಿವೇಕ ಶಾನಭೋಗ , ವಿಶಾಲ್ ಶೆಣೈ , ಭಾಸ್ಕರ್ ಶೆಣೈ , ಪಾಂಡುರಂಗ ಪೈ , ವ್ಯಾಸ ರಘುಪತಿ ಮಲ್ಯ , ಪ್ರಭಾಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.