ಹುಬ್ಬಳ್ಳಿ : ಇಲ್ಲಿನ ಅಮರಗೋಳದ ಶ್ರೀ ಜಗಜೊ್ಯೕತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ‘ರೈತ ಸಂಪರ್ಕ ಕೇಂದ್ರ’ಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಮುಂಗಾರು ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗೆ ಯಾವುದೇ ಬೀಜ ವಿತರಣೆೆಯಲ್ಲಿ ಸಮಸ್ಯೆ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರು ಸಾಲಿನಲ್ಲಿ ನಿಂತು ಬೀಜ, ಗೊಬ್ಬರ ಪಡೆಯಬೇಕು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಆಹಾರ ಧಾನ್ಯ ವರ್ತಕರ ಸಂಘಸ ಅಧ್ಯಕ್ಷ ಚನ್ನು ಹೊಸಮನಿ, ಅಶೋಕ ಬಾಳಿಕಾಯಿ, ಪ್ರಮುಖರಾದ ರಾಜಣ್ಣ ಬತ್ಲಿ, ರವಿ ಮರದ, ಬಸವರಾಜ ಯಕಲಾಸಪುರ, ಗಂಗನಗೌಡ ಪಾಟೀಲ, ಸೋಮು ಹದ್ಲಿ, ಸುರೇಶ ಹುಣಸಿಕಟ್ಟಿ, ರಾಜಣ್ಣ ವಾಲಿ, ಸೇವಕರಾಮ್ ಅಗರ್ವಾಲ, ಸಿದ್ದು ಕೊಟ್ಟುರುಶೆಟ್ಟರ, ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ ಹಾಗೂ ಇತರರು ಉಪಸ್ಥಿತರಿದ್ದರು.