ಜಿಲ್ಲೆ

ಮೈಸೂರಿನಲ್ಲಿ ‘ಟೆನೆಟ್ ಡಯಾಗ್ನೋಸ್ಟಿಕ್ಸ್’ ಸೆಂಟರ್ ಆರಂಭ

ಆರ್.ಕೃಷ್ಣ

ಮೈಸೂರು: ರೋಗ ನಿರ್ಣಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಟೆನೆಟ್ ಡಯಾಗ್ನೋಸ್ಟಿಕ್ಸ್’ ಸೆಂಟರ್ ತನ್ನ 10ನೇ ಶಾಖೆಯನ್ನು ಮೈಸೂರಿನಲ್ಲಿ ಶುಕ್ರವಾರ ಆರಂಭಿಸಿತು.
ಕುವೆಂಪುನಗರದ ಗಗನಚುಂಬಿ ರಸ್ತೆ (ಕೆಇಬಿ ಕಚೇರಿ ಬಳಿ)ಯಲ್ಲಿ ಆರಂಭಗೊಂಡಿರುವ ‘ಟೆನೆಟ್ ಡಯಾಗ್ನೋಸ್ಟಿಕ್ಸ್’ ಸೆಂಟರ್‌ಗೆ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹೊರ ರಾಜ್ಯಗಳು ಸೇರಿದಂತೆ ಹತ್ತನೇ ಶಾಖೆ ಇದಾಗಿದ್ದು, ಬೆಂಗಳೂರಿನಲ್ಲಿಯೇ 6 ಶಾಖೆಗಳನ್ನು ಹೊಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿಯೂ ಶಾಖೆ ಆರಂಭಿಸಿ ಈಗ ಮೈಸೂರಿನ ಜನತೆಗಾಗಿ ಕೇಂದ್ರ ಆರಂಭಿಸಲಾಗಿದೆ ಎಂದು ಹೇಳಿದರು.
‘ಟೆನೆಟ್ ಡಯಾಗ್ನೋಸ್ಟಿಕ್ಸ್’ ಸೆಂಟರ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುವುದು. ಫೆಥಾಲಜಿ ಸೇರಿದಂತೆ ಎಲ್ಲ ಪರೀಕ್ಷೆಗಳು ಒಂದೇ ಸೂರಿನಡಿ ದೊರಕಲಿದೆ. ತಂತ್ರಜ್ಞಾನವನ್ನು ಮತ್ತು ಸ್ಕಾೃನ್ ಮಾಡಿರುವ ದತ್ತಾಂಶವನ್ನು ಇಟ್ಟುಕೊಂಡು ರೋಗಿಗಳಿಗೆ ಕಡಿಮೆ ಸಮಯದಲ್ಲಿ ಸ್ಕಾೃನಿಂಗ್ ಮತ್ತು ನಿಖರ ಫಲಿತಾಂಶಗಳನ್ನು ನೀಡಲು ಒಹಾಯೋ ವಿಶ್ವವಿದ್ಯಾಲಯ, ಯುನೈಟೆಡ್ ಹೆಲ್ತ್ ಕೇರ್ ಮತ್ತು ಸೀಮನ್ಸ್ ಹೆಲ್ತ್ ಕೇರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕಾರ್ಯನಿರ್ವಾಹಕ ನಿರ್ದೇಶಕ ದೇವಿನೇನಿ ಚರಣ್ ಮಾತನಾಡಿ, 2018ರಲ್ಲಿ ಹೈದರಾಬಾದ್‌ನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿದ ಬಳಿಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಒರಿಸ್ಸಾ, ಜಾರ್ಖಂಡ್ ಮತ್ತು ಉತ್ತರಪ್ರದೇಶದಲ್ಲೂ ಶಾಖೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಮೈಸೂರು ಅಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಜನತೆಗೂ ಸುಲಭ ಹಾಗೂ ತ್ವರಿತವಾಗಿ ರೋಗ ಲಕ್ಷಣಗಳ ವರದಿ ಸಿಗುವಂತೆ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಕಾಯಿಲೆ ಬಂದ ತಕ್ಷಣ ನಿಖರ ಕಾರಣ ತಿಳಿದು ಅದಕ್ಕೆ ಚಿಕಿತ್ಸೆ ನೀಡಲು ಇದು ಸಹಕಾರಿ ಅಗಲಿದೆ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಕರೆ ತರಲು ತುರ್ತು ಚಿಕಿತ್ಸಾ ವಾಹನಗಳ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ತಿಳಿಸಿದರು.
ಟೆನೆಟ್ ಡಯಾಗ್ನೋಸ್ಟಿಕ್ಸ್ ಅಧ್ಯಕ್ಷ ಎಚ್.ಎನ್.ವಿಶ್ವನಾಥ್ ಮಾತನಾಡಿ, ರೇಡಿಯೋಲೋಜಿ ಮತ್ತು ಪ್ರಯೋಗಾಲಯ ಸೇವೆಗಳಿಗೆ ಅತ್ಯುತ್ತಮ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವ ಗುರಿ ಇಟ್ಟುಕೊಂಡು ಭಾರತೀಯ ರೋಗ ನಿರ್ಣಯ ಕ್ಷೇತ್ರವನ್ನು ಬದಲಾಯಿಸುವ ನಿಟ್ಟಿನಲ್ಲಿ 2018 ರಲ್ಲಿ ನಾವು ಈ ಕಾರ್ಯವನ್ನು ಕೈಗೆತ್ತಿಕೊಂಡೆವು. ಮುಂಬೈ ಮತ್ತು ಉತ್ತರ ಭಾರತಕ್ಕೆ ಕಳುಹಿಸಲಾಗುತ್ತಿದ್ದ ಹಲವಾರು ಪರೀಕ್ಷಾ ವಿಧಾನವನ್ನು ಈಗ ಒಂದೇ ಸೂರಿನಡಿ ಟೆನೆಟ್ ಡಯಾಗ್ನೋಸ್ಟಿಕ್ಸ್‌ನಲ್ಲಿಯೇ ಮಾಡಲಾಗುತ್ತಿದೆ ಎಂದರು.
ವೈದ್ಯಕೀಯ ಸೇವೆಗಳ ಮುಖ್ಯಸ್ಥ ಕಾರ್ಯ ನಿವಾರ್ಹಕ ಅಧಿಕಾರಿ ಡಾ.ಎಚ್.ಕೆ.ಆನಂದ್, ಪೆಥಾಲಜಿಸ್ಟ್‌ನ ಮುಖ್ಯಸ್ಥ ಎಂ.ಜಿ. ಸತೀಶ್, ರೇಡಿಯೋಲಜಿಸ್ಟ್ ವಿಭಾಗದ ಡಾ.ಡಿ.ಕೆ.ಶ್ವೇತಾ, ಕನ್ಸಲ್ಟೆಂಟ್ ಪ್ಯಾಥಾಲಜಿಸ್ಟ್ ಡಾ.ಎ.ಎನ್.ಧನ್ಯಾ ಇತರರು ಇದ್ದರು.