ಉಪ್ಪಿನಂಗಡಿ: ನವರಾತ್ರಿಯ ಮೊದಲ ದಿನವಾದ ಸೋಮವಾರ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಭಕ್ತರಿಗೆ ತೆನೆ ವಿತರಿಸಲಾಯಿತು. ದೇಗುಲದ ಪ್ರಧಾನ ಅರ್ಚಕ ಹರೀಶ ಉಪಾಧ್ಯಾಯ ಪೂಜಾ ವಿಧಿವಿಧಾನದ ನೇತೃತ್ವ ವಹಿಸಿದ್ದರು.
ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಸಮಿತಿ ಸದಸ್ಯರಾದ ಅರ್ತಿಲ ಕಷ್ಣರಾವ್, ಸೋಮನಾಥ ರಾಮನಗರ, ಅನಿತಾ, ಬಿ.ದೇವದಾಸ ರೈ, ಡಾ.ರಮ್ಯಾ ರಾಜಾರಾಮ್ ಕೆ.ಬಿ., ವೆಂಕಪ್ಪ ಪೂಜಾರಿ, ಪ್ರಮುಖರಾದ ಯು.ರಾಮ, ಕಂಗ್ವೆ ವಿಶ್ವನಾಥ ಶೆಟ್ಟಿ, ಸದಾನಂದ ಪೂಜಾರಿ, ಪುರಂದರ ನಟ್ಟಿಬೈಲ್, ಕಿಶೋರ್ ಜೋಗಿ, ಮಹೇಶ್ ಎನ್., ವ್ಯವಸ್ಥಾಪಕ ವೆಂಕಟೇಶ ರಾವ್, ಗುಮಾಸ್ತ ದಿವಾಕರ ಗೌಡ, ಕೃಷ್ಣಪ್ರಸಾದ ಬಡಿಲ, ಪದ್ಮನಾಭ ಕುಲಾಲ್ ಮೊದಲಾದವರಿದ್ದರು.