ಅರಕಲಗೂಡು: ತಾಲೂಕಿನ ಮಲಿಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹತ್ತು ಜನ ಚುನಾಯಿತರಾದರು.
ಸಾಲಗಾರರ ಕ್ಷೇತ್ರದಲ್ಲಿ ಸಾಮಾನ್ಯ ಸ್ಥಾನಕ್ಕೆ ಎ.ಎಸ್.ಅಕ್ಷಯ್, ಎಂ.ಕೆ. ಅರುಣ್ ಕುಮಾರ್, ಎಂ.ಆರ್. ಮಂಜುನಾಥ್, ಬಿ.ಜೆ. ಚಂದ್ರಶೇಖರ್, ಎಂ.ಎಂ.ವಿಶ್ವನಾಥ ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಗಾಯಿತ್ರಮ್ಮ, ಮಹಿಳಾ ಮೀಸಲು ಸ್ಥಾನಕ್ಕೆ ಬಿ.ಆರ್. ಮೀನಾಕ್ಷಿ, ಧರ್ಮಾವತಿ, ಬಿಸಿಎಂ ಎ ಸ್ಥಾನಕ್ಕೆ ಎಂ.ಟಿ. ಮಂಜುನಾಥ್ ಮತ್ತು ಬಿಸಿಎಂ ಬಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಸಿ. ಸಂಜಯ್ ಚುನಾಯಿತರಾದರು.
ಸಾಲಗಾರರಲ್ಲದ ಕ್ಷೇತ್ರದಿಂದ ಎ.ಸಿ.ಸುರೇಶ್ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಸಹಕಾರ ಇಲಾಖೆ ಅಧಿಕಾರಿ ಪುನೀತ್ ಚುನಾವಣೆ ಕಾರ್ಯ ನಿರ್ವಹಿಸಿದರು. ವಿಜೇತರನ್ನು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಕಾಂತರಾಜು ಇತರರು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.