ಹುಬ್ಬಳ್ಳಿ : ವಿವಿಧ ರೈಲುಗಳಿಗೆ ಉರುಳಿ ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ. ಪ್ರಯಾಗಧಾಮ್ಲ್ಲಿ ಭಂಡಾರ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಉರುಳಿ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.
ಉರುಳಿ ನಿಲ್ದಾಣಕ್ಕೆ ಮೇ 29 ರಿಂದ ಜೂನ್ 5ರವರೆಗೆ ವಾಸ್ಕೊ-ಹಜರತ್ ನಿಜಾಮುದ್ದಿನ್ ಗೋವಾ ಎಕ್ಸ್ಪ್ರೆಸ್ ರೈಲು ಬೆಳಗಿನಜಾವ 5 ಗಂಟೆಗೆ, ಹಜರತ್ ನಿಜಾಮುದ್ದಿನ್-ವಾಸ್ಕೊ ಗೋವಾ ಎಕ್ಸ್ಪ್ರೆಸ್ ರೈಲು ಸಂಜೆ 4.15ಕ್ಕೆ, ಮೇ 30ರಂದು ಯೋಗ ನಗರಿ ಋಷಿಕೇಷ- ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಸಂಜೆ 4.49ಕ್ಕೆ, ಜೂನ್ 3ರಂದು ಎಸ್ಎಸ್ಎಸ್ ಹುಬ್ಬಳ್ಳಿ- ಯೋಗ ನಗರಿ ಋಷಿಕೇಷ ಎಕ್ಸ್ಪ್ರೆಸ್ ರೈಲು ಬೆಳಗ್ಗೆ 8.59ಕ್ಕೆ ನಿಲುಗಡೆಗೊಳ್ಳಲಿವೆ.