ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಪುಣ್ಯಕ್ಷೇತ್ರ ನಾಗಲಾವಿಯ ದರ್ಗಾ ಹಜರತ್ ಷರೀಫ್ ಉರೂಸ್ ಕಾರ್ಯಕ್ರಮ ಅ. 14 ರಿಂದ 16, 2024 ರವರೆಗೆ ನಡೆಯಲಿರುವದರಿಂದ, ವಿವಿಧ ಸ್ಥಳಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಾಗಲಾವಿ ಹಾಲ್ಟ್ ನಿಲ್ದಾಣದ ಮೂಲಕ ಸಂಚರಿಸುವ 8 ರೈಲುಗಳಿಗೆ ಎರಡು ನಿಮಿಷಗಳ ಕಾಲ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ನೖಋತ್ಯ ರೈಲ್ವೆ ವಲಯ ಒದಗಿಸಿದೆ.
ತಿರುಪತಿ ಕೊಲ್ಹಾಪುರ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು (9.14/9.16), ಎಸ್ಎಸ್ಎಸ್ ಹುಬ್ಬಳ್ಳಿ - ಮಿರಜ್ ಎಕ್ಸ್ಪ್ರೆಸ್ ರೈಲು (ಬೆಳಗ್ಗೆ 11.40/11.42), ಎಸ್ಎಸ್ಎಸ್ ಹುಬ್ಬಳ್ಳಿದಾದರ್ ಎಕ್ಸ್ಪ್ರೆಸ್ ರೈಲು (ಸಂಜೆ 4.18/4.20), ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್ ರೈಲು (ಸಂಜೆ 6.40/6.42), ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು (ಸಂಜೆ 5.55/5.57), ಮಿರಜ್-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು (ಮಧ್ಯಾಹ್ನ 12.25/12.27), ದಾದರ್- ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ (ಬೆಳಗ್ಗೆ 10.13/10.15), ಬೆಳಗಾವಿಮೈಸೂರು ಎಕ್ಸ್ಪ್ರೆಸ್ ರೈಲು (ಬೆಳಗ್ಗೆ 7.40/7.42)ಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.