ಜಿಲ್ಲೆ

ರೈಲು ಸಂಚಾರ ತಾತ್ಕಾಲಿಕ ರದ್ದು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗದ ವಿಜಯಪುರ-ಬಾಗಲಕೋಟೆ ಭಾಗದ 35 ಕಿಮೀ ಜೋಡಿ ಮಾರ್ಗ ನಿರ್ವಣದ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿವಾಗಿ ರದ್ದುಗೊಳಿಸಲಾಗಿದೆ.

ಆ. 14 ರಿಂದ 23ರವರೆಗೆ ಸೊಲ್ಲಾಪುರ-ಹೊಸಪೇಟೆ ದೈನಂದಿನ ಎಕ್ಸ್​ಪ್ರೆಸ್ ಮತ್ತು ಆ. 15 ರಿಂದ 24ರವರೆಗೆ ಹೊಸಪೇಟೆ-ಸೊಲ್ಲಾಪುರ ದೈನಂದಿನ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಆ. 16 ರಿಂದ 23ರವರಗೆ ಎಸ್​ಎಸ್​ಎಸ್. ಹುಬ್ಬಳ್ಳಿ-ಸೊಲ್ಲಾಪುರ ದೈನಂದಿನ ಪ್ಯಾಸೆಂಜರ್ ಮತ್ತು ಆ. 17 ರಿಂದ 24ರವರೆಗೆ ಸೊಲ್ಲಾಪುರ-ಎಸ್​ಎಸ್​ಎ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲು, ಆ. 17 ರಿಂದ 24ರವರೆಗೆ ಸೊಲ್ಲಾಪುರ-ಧಾರವಾಡ ದೈನಂದಿನ ಪ್ಯಾಸೆಂಜರ್ ಮತ್ತು ಆ 16 ರಿಂದ 23 ರವರೆಗೆ ಧಾರವಾಡ -ಸೊಲ್ಲಾಪುರ ದೈನಂದಿನ ಪ್ಯಾಸೆಂಜರ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.

ಆ. 17ರಿಂದ 22ರವರೆಗೆ ಎಸ್​ಎಸ್​ಎಸ್. ಹುಬ್ಬಳ್ಳಿ -ವಿಜಯಪುರ ದೈನಂದಿನ ಇಂಟರ್​ಸಿಟಿ ವಿಶೇಷ ಎಕ್ಸ್​ಪ್ರೆಸ್ ಮತ್ತು ಆ. 18 ರಿಂದ 23ರವರೆಗೆ ವಿಜಯಪುರ- ಎಸ್​ಎಸ್​ಎಸ್ ಹುಬ್ಬಳ್ಳಿ ದೈನಂದಿನ ಇಂಟರ್​ಸಿಟಿ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದುಗೊಳ್ಳಲಿವೆ.

ಆ. 20 ರಿಂದ 23ರವರೆಗೆ ವಿಜಯಪುರ -ಎಸ್​ಎಸ್​ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ವಿಶೇಷ ಮತ್ತು ಎಸ್​ಎಸ್​ಎಸ್ ಹುಬ್ಬಳ್ಳಿ -ವಿಜಯಪುರ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲುಗಳ ಪ್ರಯಾಣ ರದ್ದುಗೊಳಿಸಲಾಗಿದೆ.