ಜಿಲ್ಲೆ

ಟೆಂಪೋ ರಿಕ್ಷಾ ಚಾಲಕ ಮಾಲೀಕರ ಸಂಘ ಮಹಾಸಭೆ

ಸೌಮ್ಯ ಆರ್

ಬಂಟ್ವಾಳ: ಗೂಡ್ಸ್, ಸಣ್ಣ ಮತ್ತು ದೊಡ್ಡ ಪಿಕಪ್, 407, ಟೆಂಪೋ ರಿಕ್ಷಾ ಚಾಲಕ- ಮಾಲೀಕರ ಸಂಘದ 25ನೇ ವಾರ್ಷಿಕ ಮಹಾಸಭೆ ಭಾನುವಾರ ಬಿ.ಸಿ.ರೋಡ್‌ನಲ್ಲಿ ನಡೆಯಿತು.

ವಕೀಲ ರಾಜೇಶ್ ಬೊಳ್ಳುಕಲ್ಲು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದಸ್ಯರು ತಮ್ಮ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ವಿವರಿಸಿದರು.

ನಾರಾಯಣ ಗುರು ವೃತ್ತದ ಬಳಿ ಸದಸ್ಯರು ನಿರ್ಮಿಸಿರುವ ಟೆಂಪೋ ನಿಲ್ದಾಣದಲ್ಲಿ ಅಕ್ರಮ ಗೂಡಂಗಡಿ ನಿರ್ಮಿಸಿ ವ್ಯವಹಾರ ನಡೆಸಲಾಗುತ್ತಿದೆ ಎಂಬುದನ್ನು ಸಭೆಯ ಗಮನಕ್ಕೆ ತರಲಾಯಿತು. ಕಲ್ಲಡ್ಕ ಮೆಲ್ಸೇತುವೆಯ ಕೆಳಗೆ ಗೂಡ್ಸ್ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಂತೆ ಶಾಸಕರು ಹಾಗೂ ಸಂಸದರ ಬಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಉಪಾಧ್ಯಕ್ಷ ನಾರಾಯಣ ಹೊಸಮಾರು, ಕಾರ್ಯದರ್ಶಿ ರಾಬರ್ಟ್ ಮೆಲ್ಕಾರ್, ಜತೆ ಕಾರ್ಯದರ್ಶಿ ಕೃಷ್ಣಪ್ಪ ಅಲ್ಲಿಪಾದೆ, ಕೋಶಾಧಿಕಾರಿ ಲತಿಫ್ ಉಪಸ್ಥಿತರಿದ್ದರು.