ಜಿಲ್ಲೆ

ಸಮಾಜ ಒಗ್ಗೂಡಿಸುವ ದೇಗುಲಗಳು

Gadag - Desk - Tippanna Avadoot

ಕುಮಟಾ: ಅನಾದಿ ಕಾಲದಿಂದಲೂ ದೇವಾಲಯಗಳು ಸಮಾಜ ಒಗ್ಗೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿವೆ. ಏಕೆಂದರೆ ಸಮಾಜವನ್ನು ಒಗ್ಗೂಡಿಸುವುದೇ ಧರ್ಮ. ಬಗೆಹರಿಯದ ಭಿನ್ನಾಭಿಪ್ರಾಯಗಳು ಎಂದಿಗೂ ಏಳಿಗೆಗೆ ಪೂರಕವಲ್ಲ. ನಿರ್ವಂಚನೆಯ ದೇವತಾ ಕಾರ್ಯಗಳಲ್ಲಿ ಮನಃಶಾಂತಿ ಜತೆಗೆ ಮನುಕುಲದ ಏಳಿಗೆಯೂ ಅಡಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.

ಪಟ್ಟಣದ ಗ್ರಾಮದೇವಿ ದೇವರಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ಮಂದಿರದ ನವೀಕೃತ ಸಭಾಭವನದ ದ್ವಾರ ಪೂಜೆ, ನಾಮಫಲಕ ಅನಾವರಣ, ಅನ್ನಪೂರ್ಣಾದೇವಿ ಪೂಜೆ ನೆರವೇರಿಸಿ ಆಶೀರ್ವದಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂದಿರದ ಆಡಳಿತ ಮೊಕ್ತೇಸರ ಕೃಷ್ಣ ಬಾಬಾ ಪೈ, ಕಟ್ಟಡ ನಿರ್ವಣಕ್ಕೆ ಸಹಕರಿಸಿದವರನ್ನು ನೆನೆದರು. ಶ್ರೀದೇವಿಯ ಅನುಗೃಹ, ಗುರುಹಿರಿಯರ ಆಶೀರ್ವಾದದಿಂದ ಸಂಕಲ್ಪಿತ ಸಕಲ ಕಾರ್ಯ ಈಡೇರಿಸಲು ಸಾಧ್ಯವಾಗಿದೆ ಎಂದರು.

ವೇದಮೂರ್ತಿ ದಾಮೋದರ ಭಟ್ ಧಾರ್ವಿುಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಿ.ಎ. ಸತೀಶ ಶಾನಭಾಗ, ಗ್ರಾಮದೇವಿ ಮಂದಿರದ ಅರ್ಚಕರಾದ ರಾಜು ಗುನಗ, ಪ್ರಶಾಂತ ಗುನಗ, ಪ್ರಕಾಶ ಗುನಗ ಇದ್ದರು. ಕಟ್ಟಡ ನಿರ್ವಣದಲ್ಲಿ ಸಹಕರಿಸಿದವರಿಗೆ ಸನ್ಮಾನಿಸಲಾಯಿತು.

ವೇದಘೊಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಯಿಶ್ರೀ ವೆರ್ಣೆಕರ ಪ್ರಾರ್ಥಿಸಿದಳು. ಎಂ.ಬಿ.ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಅರುಣ ಮಣಕೀಕರ, ಜಯದೇವ ಬಳಗಂಡಿ ಸನ್ಮಾನಿತರ ಯಾದಿ ಓದಿದರು. ಎನ್.ಆರ್. ಗಜು, ಆನಂದ ನಾಯ್ಕ ಇದ್ದರು. ಕಿರಣ ಪ್ರಭು ವಂದಿಸಿದರು.