filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.98142827, 0.67379457);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38; 
ಜಿಲ್ಲೆ

ದೇವಾಲಯಗಳು ಸಂಸ್ಕಾರ ಪಸರಿಸಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ತಲ್ಲೂರ: ದೇವಾಲಯಗಳು ನಮ್ಮ ಮೂಲ ಸಂಸತಿ-&ಸಂಸ್ಕಾರ ಪಸರಿಸುವ ತಾಣಗಳಾಗಲಿ ಎಂದು ನೇಸರಗಿ&ಮಲ್ಲಾಪುರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಸುೇತ್ರ ಜಾಲಿಕಟ್ಟಿ&ಜೀವಾಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ದ್ವೇಷ ಭಾವನೆ ತೊಡೆದು ಹಾಕಿ ಉತ್ತಮ ಜೀವನ ನಡೆಸಬೇಕು. ದೇವರು ಹಾಗೂ ಗುರುಗಳ ಕುರಿತು ಭಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಬೆಳಗ್ಗೆ ಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಪಂಚಾಮತ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದೇವರಿಗೆ ನೈವೇದ್ಯ, ಕಾಣಿಕೆ ಸಮರ್ಪಿಸಿ ದರ್ಶನ ಪಡೆದರು.

ಸಂಜೆ ಬಸವೇಶ್ವರ ರಥೋತ್ಸವವು ಅಪಾರ ಭಕ್ತರ ಮಧ್ಯೆ ಹರಹರ ಮಹಾದೇವ ೂಷಣೆಯೊಂದಿಗೆ ಜರುಗಿತು. ಭಕ್ತರು ರಥೋತ್ಸವಕ್ಕೆ ತೆಂಗಿನಕಾಯಿ, ಉತ್ತತ್ತಿ ಹಾಗೂ ಬಾಳೆಹಣ್ಣು ಅರ್ಪಿಸಿ ಭಕ್ತಿ ಮೆರೆದರು. ಮುಖಂಡ ಸಂಗಯ್ಯ ಹಿರೇಮಠ, ಬಸಯ್ಯ ಗೌಡರ, ಮಲನಾಯ್ಕ ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಮಹಾದೇವಯ್ಯ ಪೂಜೇರ, ಮಲ್ಲಪ್ಪ ಬಡಿಗೇರ, ಬಾಲನಾಯ್ಕ ಕಡಬಿ, ಬಸಪ್ಪ ಬಂಡ್ರೊಳ್ಳಿ, ಶಿವಾನಂದ ಅಟಿಗಲ್ಲಮಟ, ಈರಣ್ಣ ಕಂಬಾರ, ವೆ.ಎ್​.ನಾಯ್ಕರ, ನೀಲಕಂಠ ಕಂಬಾರ, ಮಹಾಂತೇಶ ಗೌಡರ, ಸಿದ್ದಯ್ಯ ಪೂಜೇರ, ಉಳವಯ್ಯ ಗೌಡರ, ಮಲ್ಲಿಕಾರ್ಜುನ ಅಂಗಡಿ, ವೆಂಕಣ್ಣ ಯರಡ್ಡಿ, ರಮೇಶ ನರಿ, ಮುತ್ತನಗೌಡ ನಾಯ್ಕರ, ಶಿವಪ್ಪ ಕುರಿ, ಬಸಪ್ಪ ಅಂಗಡಿ, ಬಸವರಾಜ ಕಡಬಿ ಇತರರಿದ್ದರು.