ಸೊರಬದ ತುಮರಿಕೊಪ್ಪ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಾಲಯದ ನೂತನ ಕಟ್ಟಡಕ್ಕೆ ಜಡೆ ಸಂಸ್ಥಾನ ಮಠದ ಡಾ.ಶ್ರೀ ಮಹಾಂತ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದರು. ಶಿವಲಿಂಗೇಗೌಡ, ರಾಜುಗೌಡ ಪುಟ್ಟಯ್ಯ ಇತರರುದ್ದರು. 
ಜಿಲ್ಲೆ

ದೇವಸ್ಥಾನಗಳು ಸಂಸ್ಕಾರದ ಪ್ರತೀಕ

ಸೊರಬ: ಗ್ರಾಮದಲ್ಲಿ ದೇವಾಲಯ ಹಾಗೂ ಶಾಲೆಗಳು ಸಂಸ್ಕಾರ ಮತ್ತು ಧಾರ್ಮಿಕತೆ ಪ್ರತೀಕ. ಇವುಗಳ ಬಗ್ಗೆ ಸದಾ ಜಾಗೃತರಾಗಬೇಕು ಎಂದು ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಗುರುವಾರ ತಾಲೂಕಿನ ಜಡೆ ಗ್ರಾಪಂನ ತುಮರಿಕೊಪ್ಪ ಗ್ರಾಮದಲ್ಲಿ ಶ್ರೀಚೌಡೇಶ್ವರಿ ದೇವಾಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಿಕ್ಷಣದಿಂದ ಮನುಷ್ಯ ಪ್ರಜ್ಞಾವಂತರಾಗಿ ಸಮಾಜ ನಡೆಸಲು ಮುನ್ನುಡಿ ಬರೆದರೆ ಧಾರ್ಮಿಕ ಶ್ರದ್ಧೆಯಿಂದ ನಡೆದಾಗ ಸಮಾಜದಲ್ಲಿ ಕೈ ಘಟನೆಗಳಿಂದ ದೂರ ಇರಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ವಿಶಾಲ ಮೊನೋಭಾವ ಹೊಂದಬೇಕು ಎಂದು ತಿಳಿಸಿದರು. ಮಾಜಿ ಜಿಪಂ ಸದಸ್ಯ ಶಿವಲಿಂಗೇಗೌಡ, ಎಪಿಎಂಸಿ ಮಾಜಿ ಸದಸ್ಯ ರಾಜುಗೌಡ ಪುಟ್ಟಯ್ಯ, ಮಹೇಶ ಇತರರಿದ್ದರು.