ಜಿಲ್ಲೆ

ದೇವಾಲಯಗಳು ನಮ್ಮ ಆಸ್ತಿ

ಮರಿದೇವ ಹೂಗಾರ

ಹುಬ್ಬಳ್ಳಿ: ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಆಸ್ತಿ ದೇವಾಲಯಗಳು. ಅವುಗಳ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ಕಾಪು ಕ್ಷೇತ್ರದ ಶಾಸಕ ಗುರಮೆ ಸುರೇಶ ಶೆಟ್ಟಿ ಹೇಳಿದರು.

ಹು-ಧಾ ಬಂಟರ ಸಂಘ, ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಪು ಮಾರಿಯಮ್ಮನ ಪ್ರತಿಷ್ಠಾಪನೆ-ಬ್ರಹ್ಮಕಲಶೋತ್ಸವ ಹಾಗೂ ನವದುರ್ಗಾ ಲೇಖನ ಯಜ್ಞದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮನುಷ್ಯ ಒಳ್ಳೆ ಕಾರ್ಯ ಮಾಡಿ ತನ್ನ ಉಸಿರು ಚೆಲ್ಲಬೇಕು ಎಂದು ಜ್ಞಾನಿಗಳು ಹೇಳುತ್ತಾರೆ. 1830ರಲ್ಲಿ ಮಾರಿಗುಡಿ ಸ್ಥಾಪನೆಯಾಗಿ ಹಲವು ರೀತಿಯಲ್ಲಿ ಜೀರ್ಣೆದ್ಧಾರಗೊಂಡಿದೆ ಎಂದರು.

ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಅಕ್ಟೋಬರ್ 28ರವರೆಗೆ ಪ್ರಚಾರ ಕಾರ್ಯ ನಡೆಯಲಿದೆ. ಅ. 29ಕ್ಕೆ ಲೇಖನ ಯಜ್ಞಕ್ಕೆ ಹೆಸರು ನೋಂದಾಯಿಸಬೇಕು ಎಂದು ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಬಿಲ್ಲವ ಸಮಾಜದ ಉಪಾಧ್ಯಕ್ಷ ಜಯರಾಮ ಪೂಜಾರಿ, ಮಹಿಳಾ ಅಧ್ಯಕ್ಷೆ ಜಲಜಾ ಪೂಜಾರಿ, ಪ್ರಮುಖರಾದ ಗೋವಿಂದ ಜೋಶಿ, ಸುಗ್ಗಿ ಸುಧಾಕರ ಶೆಟ್ಟಿ, ಬೆಳಗಾವಿಯ ವಿಠ್ಠಲ ಹೆಗ್ಡೆ, ಮಹೇಶ ಶೆಟ್ಟಿ, ಜಯರಾಮ ಪೂಜಾರಿ, ಪ್ರದೀಪ ಪಕ್ಕಳ, ಸುರೇಶ ಶೆಟ್ಟಿ, ಹರ್ಷಾ ಶೆಟ್ಟಿ, ರತ್ನಾಕರ ಶೆಟ್ಟಿ ಕರಾವಳಿ, ಪ್ರದೀಪ ಕೆ. ಶೆಟ್ಟಿ, ಹರಿಓಂ ಸುಧಾಕರ ಶೆಟ್ಟಿ, ದಿನೇಶ ಶೆಟ್ಟಿ ಇತರರು ಇದ್ದರು.