ಸಿರಿಗೇರಿಯಲ್ಲಿ ಶ್ರೀ ಸುಂಕ್ಲಮ್ಮ ಹಾಗೂ ಶ್ರೀ ಮಲೆಮ್ಮ ದೇವಸ್ಥಾನದ ಗೋಪುರ ಕಲಶಾರೋಹಣ ನಿಮಿತ್ತ ಶಾಸಕ ಬಿ.ಎಂ.ನಾಗರಾಜ ಭೇಟಿ ನೀಡಿ ದರ್ಶನ ಪಡೆದರು. ಸಿರಗುಪ್ಪ ನಗರಸಭೆ ಸದಸ್ಯ ಗಣೇಶ್, ಪ್ರಮುಖರಾದ ಸಿ.ಎಂ.ನಾಗರಾಜಸ್ವಾಮಿ, ಕೆ. ಎಂ.ಮಲ್ಲಯ್ಯಸ್ವಾಮಿ, ಬಿ.ನಾಗೇಂದ್ರ, ವಿ.ರೇಣುಕಪ್ಪ. ಎಸ್.ಎಂ. ಅಡಿವೆಯ್ಯ ಸ್ವಾಮಿ, ಗರ್ಜಿಲಿಂಗಪ್ಪ, ಎಸ್.ಎಂ.ನಾಗರಾಜ ಸ್ವಾಮಿ ಇತರರಿದ್ದರು. 
ಜಿಲ್ಲೆ

ದೇವಸ್ಥಾನ ಗೋಪುರ ಕಲಶಾರೋಹಣ

ರುದ್ರಪ್ಪ ವಾಲಿ

ಸಿರಿಗೇರಿ: ಗ್ರಾಮದ ಮೂರನೇ ವಾರ್ಡ್‌ನ ಶ್ರೀ ಸುಂಕ್ಲಮ್ಮ ಹಾಗೂ ಶ್ರೀ ಮಲೆಮ್ಮ ದೇವಸ್ಥಾನದ ಗೋಪುರಕ್ಕೆ ಬುಧವಾರ ಕಲಶಾರೋಹಣ ಮಾಡಲಾಯಿತು. ಪುರೋಹಿತರಾದ ಎಚ್.ಎಂ ಕೊಟ್ರೇಶ್ ಸ್ವಾಮಿ ಸಮ್ಮುಖದಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶಾಸಕ ಬಿ.ಎಂ. ನಾಗರಾಜ ಭೇಟಿ ನೀಡಿ ದೇವಿ ದರ್ಶನ ಪಡೆದರು. ಮುತ್ತೈದೆಯರು .ಳಸ ಹಾಗೂ ಡೊಳ್ಳು ಮೇಳದೊಂದಿಗೆ ಗಂಗೆ ಸ್ಥಳಕ್ಕೆ ಪೂಜೆ ಸಲ್ಲಿಸಿದರು. ಪ್ರಮುಖರಾದ ವೆಂಕಟೇಶ, ಶ್ರೀನಿವಾಸ್, ಕೆ. ರಾಘವೇಂದ್ರ, ಅನ್ವರ್ ಬಾಷಾ, ಕೆ.ಬಸವರಾಜ, ಸೋಮೇಶ, ನಾಗರಾಜ, ಗೋಡೆ ಚಿನಪ್ಪ, ಆಲಂ ಬಾಷಾ, ಎನ್.ಕುಮಾರ್, ಹಳ್ಳಿಮರದ ರುದ್ರಪ್ಪ, ವಸ್ತ್ರದ ಮಂಜು, ಸಲೀಂ, ದಾನಪ್ಪ, ಶಿವಪ್ಪ, ತಿಮ್ಮಯ್ಯ ಇತರರಿದ್ದರು.