ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರ ದೇವಸ್ಥಾನದ ಹುಂಡಿ ಹಣ ಎಣಿಕೆ ನಡೆಯಿತು. ಉಪ ತಹಸೀಲ್ದಾರ್ ವಿಜಯ ಕುಮಾರ ಗುಂಡೂರು, ಕಂದಾಯ ನಿರೀಕ್ಷಕ ಶರಣಪ್ಪ, ದೇವಸ್ಥಾನ ವ್ಯವಸ್ಥಾಪಕ ಚಂದಪ್ಪ ಕುರಿ, ದಳಪತಿ ರವೀಂದ್ರಗೌಡ ಪೊಲೀಸ್ ಪಾಟೀಲ್, ಹನುಮಗೌಡ ಗೌಡ್ರ ವೆಂಕಟೇಶ ಚಿಣಗಿ ಇತರರಿದ್ದರು. 
ಜಿಲ್ಲೆ

ದೇವಸ್ಥಾನದ ಹುಂಡಿ ಹಣ ಎಣಿಕೆ

ರುದ್ರಪ್ಪ ವಾಲಿ

ಯಲಬುರ್ಗಾ: ತಾಲೂಕಿನ ಸುಪ್ರಸಿದ್ದ ಚಿಕ್ಕವಂಕಲಕುಂಟಾ ಮಾರುತೇಶ್ವರ ದೇವಸ್ಥಾನದಲ್ಲಿ ಶನಿವಾರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು 1,07,610, ರೂ. ಸಂಗ್ರಹವಾಗಿದೆ.

108 ಬೆಳ್ಳಿ ನಾಣ್ಯ, ಸಿಂಗಾಪುರದ 50 ರೂ.ಮುಖಬೆಲೆಯ ನಾಣ್ಯಗಳು ಹುಂಡಿಯಲ್ಲಿ ದೊರೆತವು ಎಂದು ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರು ತಿಳಿಸಿದರು. ಎಣಿಕೆ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಶರಣಪ್ಪ ದೇವಸ್ಥಾನದ ವ್ಯವಸ್ಥಾಪಕ ಚಂದಪ್ಪ ಕುರಿ, ದಳಪತಿ ರವೀಂದ್ರಗೌಡ ಪೊಲೀಸ್ ಪಾಟೀಲ್, ಹನುಮಗೌಡ ಗೌಡ್ರ ವೆಂಕಟೇಶ ಚಿಣಗಿ ಇತರರಿದ್ದರು.