ಜಿಲ್ಲೆ

ದೇವಸ್ಥಾನದ ಬೀಗ ಮುರಿದು ಚಿನ್ನಾಭರಣ ಕಳ್ಳತನ

Haveri - Kariyappa Aralikatti

ರಾಣೆಬೆನ್ನೂರ: ದೇವಸ್ಥಾನದ ಶರ್ಟಸ್​ನ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು 93 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ತಾಲೂಕಿನ ಕರೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು.

ಯಾರೋ ಖದೀಮರು ದೇವಸ್ಥಾನದ ಶರ್ಟಸ್​ ಮುರಿದು ಒಳಗೆ ನುಗ್ಗಿ ದೇವಿಗೆ ಸಂಬಂಧಿಸಿದ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.