ಜಿಲ್ಲೆ

ದೇಗುಲ ಚಿನ್ನಾಭರಣ, ಹುಂಡಿ ಕಳವು

ಕುದೂರು: ಸೋಲೂರು ಹೋಬಳಿಯ ವಡ್ಡರಹಳ್ಳಿಯ ಮರಿಯಮ್ಮ ಪಳೇಕಮ್ಮ ದೇವಿಯ ಚಿನ್ನಾಭರಣ,

ಹಾಗೂ ಹುಂಡಿ ಹಣ ಸೋಮವಾರ ಕಳ್ಳತನವಾಗಿದೆ.

ಸೋಮವಾರ ತಡರಾತ್ರಿ ದೇಗುಲಕ್ಕೆ ನುಗ್ಗಿದ ಕಳ್ಳರು ದೇವಿಯ ಮೇಲಿದ್ದ 15 ಗ್ರಾಂ ಚಿನ್ನದ ಸರಗಳು ಹಾಗೂ 1.5 ಕೆಜಿ ಬೆಳ್ಳಿ ಕಿರೀಟಗಳು ಸೇರಿ ಹುಂಡಿಯಲ್ಲಿದ್ದ 25 ಸಾವಿರ ರೂ. ಕದ್ದು, ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಮುಂಭಾಗ ಹುಂಡಿ ಒಡೆದು, ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ದೇವಾಲಯದ ಅರ್ಚಕ ಭುಜಂಗರಾವ್​ ಶಿಂಧೆ ಕುದೂರು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.