ಜಿಲ್ಲೆ

ಧರ್ಮಸ್ಥಳ, ಸುಬ್ರಹ್ಮಣ್ಯ ಸಹಿತ ಪ್ರಮುಖ ದೇವಳಗಳತ್ತ ಭಕ್ತರ ದಂಡು

reportermng

ಮಂಗಳೂರು: ಎರಡು ತಿಂಗಳ ಲಾಕ್‌ಡೌನ್‌ ಬಳಿಕ ಸೋಮವಾರ ದೇವಳಗಳಿಗೆ ಭಕ್ತರು ಭೇಟಿ ನೀಡಿದ್ದಾರೆ. ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು, ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಳು ಮತ್ತೆ ಭಕ್ತರಿಂದ ಗಿಜಿಗುಡುತ್ತಿದೆ.
ಬೆಳಗ್ಗೆ 5 ಗಂಟೆಯಿಂದಲೇ ಭಕ್ತರು ಭೇಟಿ ನೀಡಿದ್ದಾರೆ. ಸೋಮವಾರವಾಗಿರುವುದರಿಂದ ಶಿವದೇವಾಲಯಗಳಲ್ಲಿ ಹೆಚ್ಚಿನ ಭಕ್ತರು ಕಂಡು ಬಂದರು. ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಹೊರ ಜಿಲ್ಲೆಗಳ ಭಕ್ತರ ಸಂಖ್ಯೆ ಹೆಚ್ಚಿತ್ತು.
ಕೇವಲ ದೇವರ ದರ್ಶನ ಪ್ರಾರ್ಥನೆ ಮಾಡಿ ಹೋಗಲು ಮಾತ್ರ ಅವಕಾಶ ಇರುವುದರಿಂದ ದೇವಳದ ಪ್ರಾಂಗಣದಲ್ಲಿ ಹೆಚ್ಚಿನ ಜನ ಸಂದಣಿ ಇರಲಿರಲ್ಲ. ಕೆಲವು ದೇವಳಗಳಲ್ಲಿ ಸರತಿಯಲ್ಲಿ ಸ್ವಲ್ಪ ಸ್ವಲ್ಪವೇ ಜನರನ್ನು ಒಳಗೆ ಕಳುಹಿಸಲಾಯಿತು. ಸರ್ಕಾರ ಮಾರ್ಗಸೂಚಿಂತೆ ಮಾಸ್ಕ್‌ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಏಕಾದಶಿ ಆಗಿರುವುದರಿಂದ ಕೆಲವು ದೇವಳಗಳಲ್ಲಿ ಬೆಳಗ್ಗೆ ಮಾತ್ರ ಪೂಜೆ ಇತ್ತು.