ಜಿಲ್ಲೆ

ದೇಗುಲ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿ

ಧನಂಜಯ ಎಸ್.ಹಕಾರಿ.

ಪರಶುರಾಮಪುರ: ವೇದಾವತಿ ನದಿ ತಟದಲ್ಲಿರುವ ಚಿಲುಮೆರುದ್ರಸ್ವಾಮಿ ಗದ್ದುಗೆ ಬಳಿ ದೇವಸ್ಥಾನ ನಿರ್ಮಾಣಕ್ಕೆ ಭಕ್ತರು ಆರ್ಥಿಕ ನೆರವು ಒದಗಿಸಬೇಕು ಎಂದು ದೇಗುಲ ಸಮಿತಿ ಅಧ್ಯಕ್ಷ ನಾಗಗೊಂಡನಹಳ್ಳಿ ಎಚ್.ಓಬಳಪ್ಪ ಮನವಿ ಮಾಡಿದರು.

ನಾಗಗೊಂಡನಹಳ್ಳಿ ಗ್ರಾಮದ ಧಾರ್ಮಿಕ ಕ್ಷೇತ್ರವಾದ ಗುರು ಚಿಲುಮೆರುದ್ರಸ್ವಾಮಿ ಮಠದ ಆವರಣದಲ್ಲಿ ಇತ್ತೀಚೆಗೆ ದೇವಸ್ಥಾನ ಸಮಿತಿ ಆಯೋಜಿಸಿದ್ದ

ಕಾರ್ಯಕ್ರಮದಲ್ಲಿ ದೇಗುಲದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸುತ್ತಮುತ್ತಲ ಗ್ರಾಮಗಳ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಸ್ವಾಮಿಯ ಕೃಪೆಗೆ ಪಾತ್ರರಾಗಲು ದೇವಸ್ಥಾನ ನಿರ್ಮಾಣ ಅವಶ್ಯವಾಗಿದೆ ಎಂದರು.

ಸ್ಥಳೀಯ ಜನಪ್ರತಿನಿಧಿಗಳು ಈ ಮಹತ್ತರವಾದ ಕಾರ್ಯಕ್ಕೆ ಕೈಜೋಡಿಸಬೇಕಿದೆ. ಚಿಲುಮೆರುದ್ರಸ್ವಾಮಿ ಗದ್ದುಗೆ ಬಳಿ ಪ್ರತಿ ವರ್ಷ ಭಕ್ತರು ಜಾತ್ರೆ ಆಯೋಜಿಸಲಾಗುತ್ತದೆ.

ರಥೋತ್ಸವ ಹಮ್ಮಿಕೊಂಡು ಈ ಭಾಗದ ಹಳ್ಳಿಗಳ ಜನರ ನಡುವೆ ಸಾಮರಸ್ಯತೆ ಬೆಳೆಯಲು ಕಾರಣವಾಗಿದೆ. ಹೀಗಾಗಿ ಇಲ್ಲಿ ಸುಸಜ್ಜಿತ ದೇಗುಲ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ಸುರೇಶ, ಪಗಡಲಬಂಡೆ ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ, ಜೆ.ಎಚ್.ಬೊಮ್ಮಯ್ಯ, ಸಿದ್ದೇಶ, ಹಂಪಣ್ಣ, ನರಸಿಂಹಪ್ಪ, ರವಿಚಂದ್ರ, ಮಲ್ಲಿಕಾರ್ಜುನಸ್ವಾಮಿ, ಜೆ.ಎಲ್.ಶ್ರೀನಿವಾಸ, ರೈತ ಮುಖಂಡ ಕೆ ಪಿ ಭೂತಯ್ಯ ಇದ್ದರು.