ಜಿಲ್ಲೆ

ಹೊಸಗುಂದ ಉತ್ಸವ, ಲಕ್ಷ ದೀಪೋತ್ಸವ ಸಂಪನ್ನ

Shivamogga

ಆನಂದಪುರ: ಹೊಸಗುಂದದ ಶ್ರೀ ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಹೊಸಗುಂದ ಉತ್ಸವ ಮತ್ತು ಲಕ್ಷ ದೀಪೋತ್ಸವ ಸೋಮವಾರ ಸಂಪನ್ನಗೊಂಡಿತು.

ಹೊಸಗುಂದ ಮುಖ್ಯ ಪ್ರವೇಶ ದ್ವಾರದಿಂದ ಶ್ರೀ ಉಮಾಮಹೇಶ್ವರ ದೇವಾಲಯ ಹಾಗೂ ಕಂಚಿಕಾಳಮ್ಮ ದೇವಾಲಯದ ರಸ್ತೆ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ವಿಶಾಲವಾದ ಪುಷ್ಕರಿಣಿ, ಗೋಶಾಲೆ, ಪರಿವಾರ ದೇವಾಲಯಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಣ್ಣಿನ ಹಣತೆ ಮತ್ತು ಗಾಜಿನ ಹಣತೆ ಬಳಸಿ ಬೆಳಗಿದ ಲಕ್ಷ ದೀಪೋತ್ಸವ ಕಣ್ಮನ ಸೆಳೆಯಿತು.

ಸೋಮವಾರ ಸಂಜೆ ಲಕ್ಷದೀಪೋತ್ಸವಕ್ಕೆ ಬೆಂಗಳೂರಿನ ಸಿಐಡಿ ಎಸ್ಪಿ ಭೀಮಾಶಂಕರ ಗುಳೇದ ಚಾಲನೆ ನೀಡಿದರು. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್​ನ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಎಂ.ಎನ್.ಶಾಸ್ತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶೃಂಗೇರಿ ಶಂಕರಮಠದ ಆಡಳಿತಾಧಿಕಾರಿ ಡಾ. ಗೌರೀಶಂಕರ, ಜಾನಪದ ಕಲಾವಿದ ಬಿ.ಟಾಕಪ್ಪ, ತಾಪಂ ಸದಸ್ಯೆ ಜ್ಯೋತಿ ಕೋವಿ, ಗುರುಮೂರ್ತಿ ಮತ್ತಿತರರು ಇದ್ದರು.