ಶಿವಶಕ್ತಿಧಾಮದ ಆವರಣದಲ್ಲಿರುವ ವಿವಿಧ ಗುಡಿಗಳಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶನೈಶ್ಚರ ದೇಗುಲದಲ್ಲಿ ಸುಮಾರು 2.5 ಅಡಿ ಎತ್ತರದ ಮೂರ್ತಿ ಇದೆ. ಜ್ಞಾನಾಂಬಿಕೆ ದೇಗುಲದಲ್ಲಿ 2.5 ಅಡಿ ಎತ್ತರದ ಪಾರ್ವತಿ ಮೂರ್ತಿ ಇದೆ. ಮೂರುವರೇ ಅಡಿ ಎತ್ತರದ ವಿಜಯ ಗಣಪತಿ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಇದೇ ರೀತಿ ಕಾಲಭೈರವ, ಚಂಡಿಕೇಶ್ವರ ಮೂರ್ತಿಗಳು ಇಲ್ಲಿವೆ. ಆವರಣದಲ್ಲಿ ಒಂದೂವರೆ ಅಡಿ ಎತ್ತರದ ಮೂರ್ತಿಗಳಿರುವ ನವಗ್ರಹ ನಿರ್ವಿುಸಲಾಗಿದೆ. ದೇವಾಲಯದ ರಾಜಗೋಪುರ ಸುಮಾರು 60 ಅಡಿ ಎತ್ತರವಿದೆ. ಇದರಲ್ಲಿ ವಿವಿಧ ದೇವತೆಗಳ ವಿಗ್ರಹಗಳು ಇವೆ. ಬ್ರಹ್ಮ, ಚಂದ್ರ- ಸೂರ್ಯರ ಚಿತ್ರಣಗಳಿವೆ. ರಾಜಗೋಪುರದಿಂದ ಶಿವಾ ದೇವಾಲಯಕ್ಕೆ ಪ್ರವೇಶವಿದ್ದು, ಮುಖ್ಯ ಗರ್ಭಗುಡಿ 55 ಅಡಿ ಎತ್ತರವಿದೆ. ಅದರಲ್ಲಿ ಮೂರುವರೇ ಅಡಿ ಎತ್ತರದ ಶಿವಲಿಂಗ, ಎದುರಿನಲ್ಲಿ ನಂದಿ ಮೂರ್ತಿ ಇವೆ. ದೇಗುಲಗಳು ಸಂಪೂರ್ಣ ಶಿಲ್ಪಗಳಿಂದ ತಯಾರಾಗಿವೆ. ಮುರುಡೇಶ್ವರದ ಗೋಪುರ, ದೇಗುಲ ನಿರ್ವಿುಸಿದ್ದ ಸ್ವಾಮಿನಾಥನ್ ಸ್ಥಪತಿ ಅವರ ಉಸ್ತುವಾರಿಯಲ್ಲಿ ಶಿವಾ ದೇವಾಲಯ ನಿರ್ವಿುಸಲಾಗಿದೆ. ಸ್ವಾಮಿನಾಥನ್ ಅವರ ಪುತ್ರ ವೆಂಕಟಕೃಷ್ಣ ಡಿಸೈನ್, ಡ್ರಾಯಿಂಗ್ ರಚನೆ ಮಾಡಿದ್ದಾರೆ. ರಾಮಕೃಷ್ಣ ಅವರ ಪುತ್ರ ಮಗೇಶ್ವರ ಶಿಲ್ಪಕಲೆ ರಚನೆ ಮಾಡಿದ್ದಾರೆ. ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ಶಿವಾ ದೇವಾಲಯ ಮೂಡಿ ಬಂದಿದೆ. ಮುಖ್ಯ ಮಹಾದ್ವಾರವು 40 ಅಡಿ ಎತ್ತರ ಇದೆ. ರಾಘವೇಂದ್ರ ಅವರು ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರವಚನಕ್ಕೆ ಸಭಾಗೃಹ: ದೇವಾಲಯಕ್ಕೆ ಬಂದು ಕೆಲವು ದಿನ ಸ್ವಾಮೀಜಿಗಳು ಇಲ್ಲಿಯೇ ಇರಬಹುದಾಗಿದೆ. ಹೀಗೆ ಇರುವ ಸ್ವಾಮೀಜಿಗಳು ಪಾಠ, ಪ್ರವಚನ ಮಾಡಲು ಸಭಾಗೃಹ ನಿರ್ವಿುಸಲಾಗಿದೆ. ಜ್ಞಾನ ಹಾಗೂ ಅನ್ನದಾಸೋಹ ಎರಡನ್ನೂ ಇಲ್ಲಿ ಮಾಡಬಹುದಾಗಿದೆ. ವಸತಿಗಾಗಿ ವಸತಿ ಸಮುಚ್ಛಯಗಳಿದ್ದು, ಅದರಲ್ಲಿ ಸ್ವಾಮೀಜಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಭಕ್ತರಿಗೂ ಇರಲು ಅವಕಾಶಗಳಿವೆ. ಸ್ವಾಮೀಜಿಗಳು, ಸಾರ್ವಜನಿಕ ಭಕ್ತರಿಗಾಗಿ ಸ್ಪೆಷಲ್ ರೂಮ್್ಸ, ಡಾರ್ವಿುಟರಿ, ಪ್ರಸಾದ ಕೊಠಡಿ, ದೊಡ್ಡ ಸಭಾಭವನ ಹೀಗೆ ಎಲ್ಲ ಸೌಲಭ್ಯಗಳು ದೇವಾಲಯ ಆವರಣದಲ್ಲಿ ಸಜ್ಜುಗೊಂಡಿವೆ.
ಹೊರ ಸಭಾಗೃಹದ ಅಂದ: ದೇವಸ್ಥಾನ ಪ್ರಾಂಗಣದಲ್ಲಿ ಸಭಾಗೃಹ ನಿರ್ವಿುಸಲಾಗಿದೆ. ಏನಾದರೂ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ಇದರ ಸೊಬಗು ಮತ್ತಷ್ಟು ಹೆಚ್ಚಲಿದೆ. ಸಭಾಗೃಹದ ಕೆಳಗೆ 4 ನೀರಿನ ಟ್ಯಾಂಕ್ಗಳಿವೆ. ಪ್ರತಿ ಟ್ಯಾಂಕ್ನಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿದೆ. ಸುತ್ತಮುತ್ತ ಹುಲ್ಲು ಹಾಸು ಹಾಕಲಾಗಿದ್ದು, ಇದರಿಂದ ಸಭಾಗೃಹದ ಅಂದ ಹೆಚ್ಚಿದೆ.