ಕುಶಾಲನಗರ:
ಕುಶಾಲನಗರದ ನೆಹರೂ ಬಡಾವಣೆಯಲ್ಲಿ ಇರುವ ಬಲಮುರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ 27ನೆಯ ವಾರ್ಷಿಕೋತ್ಸವ ಮತ್ತು 25ನೇ ವರ್ಷದ
ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮಗಳು ಫೆ. 7 ಮತ್ತು 8 ರಂದು ನಡೆಯಲಿದೆ.
ಫೆ. 7ರಂದು ಶುಕ್ರವಾರ ಕಳಸ ಸ್ಥಾಪನೆ, ಶುದ್ದಿ ಪುಣ್ಯಹ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ದೇವಾಲಯ ಒಕ್ಕೂಟ ಸಮಿತಿಯ ಸಂಕಲ್ಪ (ಬೆಳಗ್ಗೆ 9.30) ಮಹಾ ಮಂಗಳಾರತಿ ಪೂಜಾ ಕಾರ್ಯಗಳು ನಡೆಯಲಿವೆ.
ಫೆ. 8ರಂದು ಶನಿವಾರ ಏಕಾದಶಿ ತಿಥಿ, ಬಲಮುರಿ ಸಿದ್ದಿ ವಿನಾಯಕ ಸ್ವಾಮಿಯ ಪೂಜಾ ಮಹೋತ್ಸವ ಬೆಳಗ್ಗೆ 9 ಗಂಟೆಯಿAದ ಗಣಪತಿ ಹೋಮ ಮತ್ತು ಸ್ವಾಮಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಳಾರತಿ ಅನ್ನ ಪ್ರಸಾದ ವಿನಿಯೋಗ ಇರುತ್ತದೆ. ಅದೇ ದಿನ ಸಂಜೆ 7 ಗಂಟೆಯಿAದ ಮಂಗಳವಾದ್ಯಗಳೊAದಿಗೆ ಉತ್ಸವ ಮೂರ್ತಿಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಎಂದು ಆಡಳಿತ ಮಂಡಳಿಯ ಅಧ್ಯಕ್ಷ ರೇಣುಕುಮಾರ್, ಕಾರ್ಯದರ್ಶಿ ಅರುಣ್ ಹಾಗೂ ಖಜಾಂಜಿ ಬಿ.ಸಿ. ಆನಂದ್ ಮಾಹಿತಿ ನೀಡಿದ್ದಾರೆ.