ಮಡಿಕೇರಿ:
ಸಮೀಪದ ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಸೆ.22 ರಿಂದ ಅ.2ರ ವರೆಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ 9.30 ಗಂಟೆಗೆ ಅಲಂಕಾರ ಪೂಜೆ ಜರುಗಲಿದೆ. ಸೆ.30 ರಂದು ದುರ್ಗಾಷ್ಟಮಿಯ ಅಂಗವಾಗಿ ಬೆಳಗ್ಗೆ 9.30 ಗಂಟೆಗೆ ಗಣಪತಿ ಹೋಮ, ಶ್ರೀ ದುರ್ಗಾ ಹವನ ನಡೆಯಲಿದೆ. ಮಧ್ಯಾಹ್ನ ಅನ್ನ ಸಂಪರ್ತಣೆ ನೆರವೇರಲಿದ್ದು, ಸಂಜೆ 7 ಗಂಟೆಗೆ ವಿಶೇಷ ದುರ್ಗಾ ಪೂಜೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.