ಜಿಲ್ಲೆ

ಆಕರ್ಷಣೆಯ ಕೇಂದ್ರಗಳಾಗಿ ದೇವಸ್ಥಾನ ನಿರ್ಮಾಣ -  ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯ -  ಗ್ರಾಮವಾರು ಸಮಿತಿ ರಚನೆಗೆ ಚಾಲನೆ

Mangaluru - Nishantha Narayana

ಪುತ್ತೂರು: ವ್ಯವಸ್ಥೆಗಳ ಜತೆಗೆ ಆಕರ್ಷಣೆಯ ಕೇಂದ್ರಗಳಾಗಿ ದೇವಸ್ಥಾನ ನಿರ್ಮಾಣವಾಗಬೇಕು. ಭಕ್ತರ ಹಣ ದುರುಪಯೋಗ ಆಗದ ರೀತಿಯಲ್ಲಿ ಕೆಲಸಗಳು ನಡೆಯಬೇಕು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಗ್ರಾಮವಾರು ಸಮಿತಿ ರಚನೆಗೆ ಚಾಲನೆ ನೀಡಿ ಮಾತನಾಡಿದರು.

ದೇವಸ್ಥಾನದಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆ ಇರಬೇಕೆಂಬ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಸಮಿತಿ ರಚಿಸಲಾಗುತ್ತಿದೆ. ದೇವಸ್ಥಾನದ ವಿಚಾರಗಳನ್ನು ತಿಳಿಸುವ ಕೊಂಡಿಯಾಗಿ ಗ್ರಾಮ ಸಮಿತಿಗಳಿರಬೇಕು. ಬೇರೆ ರಾಜ್ಯಗಳ ಸಂಗಮಕ್ಕೆ ಹೋಗುವವರು ನಮ್ಮ ಊರಿನ ಸಂಗಮ ಸ್ಥಳವನ್ನು ಮರೆಯಬಾರದು ಎಂದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭಕ್ತ ಸಮಿತಿ ಪಡೂರು ರಚಿಸಲಾಯಿತು. ಹರಕೆ ಪ್ರಯುಕ್ತ ರಂಗಪೂಜೆ ನಡೆಸಲಾಯಿತು. ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕೆರೆ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ಒಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕುಂಜಾರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ರಾವ್ ಕುಂಜಾರು, ರೋಹನ್ ಪೂಜಾರಿ ಮಾವಿನಕಟ್ಟೆ, ಮನೋಹರ ಆರುವಾರಗುತ್ತು, ರಾಧಾಕೃಷ್ಣ ಕುಂಜಾರು, ಬಾಳಪ್ಪ ನಾಯ್ಕ ಕುಂಜಾರು, ಸ್ವಪ್ನಾ ಚೈತ್ರಾ ನಾರಾಯಣ ಸೇಡಿಯಾಪು, ಶೋಭಾ ಶ್ರೀಧರ ಗೌಡ ಪೊಯ್ಯೆ ಮತ್ತಿತರರಿದ್ದರು.

ವರುಣ್ ಕೆ.ಪಿ. ಸ್ವಾಗತಿಸಿದರು. ಮುರಳೀಕೃಷ್ಣ ಕಡವ ವಂದಿಸಿದರು.

ದೇವಸ್ಥಾನದಲ್ಲಿ ವಿವಿಧ ರೀತಿಯ ಅಭಿವೃದ್ಧಿಯಾಗಬೇಕಾಗಿದ್ದು, ಪ್ರತಿಯೊಬ್ಬರ ಸಹಕಾರ ಬೇಕಾಗಿದೆ. ಒಳ್ಳೆಯ ಕೆಲಸಗಳಿಗೆ ಜನರ ಸ್ಪಂದನೆ ಸಿಗುತ್ತದೆ. ರಾಜಕೀಯ ರಹಿತವಾಗಿ ದೇವಸ್ಥಾನ ಹಾಗೂ ಊರನ್ನು ಅಭಿವೃದ್ಧಿ ಮಾಡಬೇಕಾಗಿದೆ. ಶಾಸಕರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕೆಲಸವನ್ನು ನಮ್ಮಿಂದ ನಡೆಯಬೇಕು.

| ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ