ಜಿಲ್ಲೆ

೮ರಿಂದ ಪುತ್ತೂರು ದೇಗುಲದಲ್ಲಿ ಧಾರ್ಮಿಕ ಕಾರ್ಯ

Mangaluru - Nishantha Narayana

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ನಡೆದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದು ವಿವಿಧ ಪರಿಹಾರ ಕಾರ್ಯಕ್ರಮಗಳು ಮಾ.೮ರಿಂದ ೧೪ರವರೆಗೆ ನಡೆಯಲಿದೆ. ೮ರಂದು ಸಾಯಂಕಾಲ ೬ಕ್ಕೆ ಅಘೋರ ಹೋಮ, ಬಾದೋಚ್ಚಾಟನೆ, ವನದುರ್ಗಾಹೋಮ, ೯ರಂದು ಬೆಳಗ್ಗೆ ೮ರಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜ್ಯಯ ಹೋಮ, ಸಂಜೆ ೪ರಿಂದ ದುರ್ಗಾ ಪೂಜೆ, ರಾತ್ರಿ ೮ರಿಂದ ದೈವ ತಂಬಿಲ, ೧೦ರಂದು ಬೆಳಗ್ಗೆ ೭.೩೦ಕ್ಕೆ ಪವಮಾನ ಹೋಮ, ಭೂ ವರಾಹ ಶಾಂತಿ, ತಿಲಹೋಮ, ೧೧ರಂದು ಸರ್ಪಸಂಸ್ಕಾರ, ೧೪ರಂದು ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯನಿರ್ವಹಣಾಽಕಾರಿ ಕೆ.ವಿ. ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.