raichur 
ಜಿಲ್ಲೆ

ಬಿಸಿಲು ನಾಡಲ್ಲೆ ಹೆಚ್ಚಿದ ತಾಪಮಾನ: ಚಿಕ್ಕ ಮಕ್ಕಳು ತತ್ತರ ನಿರ್ಜಲಿಕರಣದಿಂದ ಮಕ್ಕಳು ಆಸ್ಪತ್ರೆಗೆ ದಾಖಲು

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಜಿ¯್ಲೆಯಲ್ಲಿ ಬಿಸಿಲಿನ ಹೊಡೆತಕ್ಕೆ ಜನ ದಿನದಿಂದ ದಿನಕ್ಕೆ ತತ್ತರಿಸಿದ್ದು, ಬಿಸಿಲಿನ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆ ಸರಾಸರಿ ತಾಪಮಾನ ಚಿಕ್ಕಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ

ಪ್ರತೀ ವರ್ಷಕ್ಕಿಂತಲೂ ಈ ಬಾರಿಯ ಬಿಸಿಲು ತುಸು ಹೆಚ್ಚಾಗಿಯೇ ಇದೆ. ಇದರಿಂದ ಬಿಸಿಲಿಗೆ ಹೆದರಿ ಜನ ಮನೆಯಿಂದ ಹೊರಗೆ ಬರದಂತ ಪರಸ್ಥಿತಿ ನಿರ್ಮಾಣವಾಗಿದೆ.

ಬಿಸಿಲಿನ ತಾಪಮಾನ ಸರಾಸರಿ ೪೨ ಡಿಗ್ರಿ ಸೇ. ಹೆಚ್ಚಾದ ತಾಪಮಾನದಿಂದ ವಯೋವೃದ್ದರು ಹಾಗೂ ಚಿಕ್ಕಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ವೃದ್ದರು ಮುಂಜÁಗ್ರತೆಯಿAದ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಪೋಷಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರು ಚಿಕ್ಕಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ. ನಿರ್ಜಲಿಕರಣ(ಡಿಹೈಡ್ರೇಷನ್)ಜ್ವರ ಸೇರಿ ನಾನಾ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.

ಆಸ್ಪತ್ರೆಯಲ್ಲಿ ಮಕ್ಕಳ ದಾಖಲೆ ಹೆಚ್ಚಳ

ಬಿಸಿಲಿನ ತಾಪಮಾನದಿಂದ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ಆರೋಗ್ಯ ಏರುಪೇರಾಗಿದ್ದು, ಇದರಿಂದ ಡಿಹೈಡ್ರೇಷನ್ ಫೀವರ್‌ನಿಂದ ಸರ್ಕಾರಿ ಹಾಗೂ ಖಾಸಗಿ ಮಕ್ಕಳ ಆಸ್ಪತ್ರೆಗಳಿಗೆ ಮಕ್ಕಳು ದಾಖಲಾಗುತ್ತಿz್ದÁರೆ. ನಿತ್ಯ ಖಾಸಗಿ ಆಸ್ಪತ್ರೆಯಲ್ಲಿ ೮ ರಿಂದ ೧೦ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ೨೦ ರಿಂದ ೩೦ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ರಿಮ್ಸ್ನಲ್ಲಿ ವಿಶೇಷ ವಾರ್ಡ್ ಆರಂಭ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿರುವುದರಿಂದ ರಿಮ್ಸ್ ಆಸ್ಪತ್ರೆಯಲ್ಲಿ ಕಳೆದ ವರ್ಷ ಸನ್ ಸ್ಟೊçÃಕ್ ಒಳಗಾಗುವ ರೋಗಿಗಳಿಗಾಗಿಯೇ ಹೀಟï ಸ್ಟೊçÃಕ್ ಮ್ಯಾನೇಜ್ಮೆಂಟï ವಾರ್ಡ್ನ್ನು ತೆರೆಯಲಾಗಿದೆ. ಆಸ್ಪತ್ರೆಯಲ್ಲಿ ೧೦ ಬೆಡ್‌ಗಳ ಎರಡು ವಾರ್ಡ್ ತೆರೆಯಲಾಗಿದೆ. ಚಿಕ್ಕಮಕ್ಕಳಿಗಾಗಿ ಹಾಗೂ ದೊಡ್ದವರಿಗಾಗಿ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. ವಾರ್ಡ್ಗಳಲ್ಲಿ ಎಸಿ ವ್ಯವಸ್ಥೆ, ಕಾರ್ಡಿಯಾಕ್ ಮಾನಿಟರ್, ಐವಿ -ÀÇ್ಲಯಡï, ಓಆರ್‌ಎಸ್ ಇನ್ನಿತರ ಔಷಽ, ಅಗತ್ಯ ಬಿದ್ದರೆ ಬಳಸಲು ವೆಂಟಿಲೇಟರ್ ವ್ಯವಸ್ಥೆ ಸಹ ಮಾಡಲಾಗಿದೆ.

ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಸಮಸ್ಯೆ

ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜನರು ಟೀನ್ ಶೇಡ್‌ನಲ್ಲಿ ವಾಸ ಮಾಡುತ್ತಿರುವುದರಿಂದ ಬಿಸಿಲಿನ ಝಳದಿಂದ ಮಕ್ಕಳಲ್ಲಿ ಹೆಚ್ಚಾಗಿ ಡಿಹೈಡ್ರೇಷನ್ ,ಸನ್ ಸ್ಟೊçÃಕ್ ಸಮಸ್ಯೆ ಕಂಡು ಬರುತ್ತಿದೆ. ನಿರ್ಜಲೀಕರಣದಿಂದ ಬಳಲುತ್ತಿರುವ ಮಕ್ಕಳಲ್ಲಿ ಹೆಚ್ಚು ಸುಸ್ತು, ತೂಕದಲ್ಲಿ ಇಳಿಕೆ ಕಂಡು ಬರುತ್ತಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕಿಡ್ನಿ ಸಮಸ್ಯೆ ಸಹ ಎದುರಾಗುವ ಸಂಭವಗಳಿವೆ. ಹೀಗಾಗಿ ಪೋಷಕರು ಮಕ್ಕಳನ್ನ ಬಿಸಿಲಿನಿಂದ ದೂರವಿಡುವಂತೆ ವೈದ್ಯರು ಎಚ್ಚರಿಕೆ ನೀಡುತ್ತಿz್ದÁರೆ. ಈ ಬಾರಿಯ ಬಿಸಿಲು ಬಿಸಿಲನಾಡಿನ ಜನರು ತತ್ತರಿಸುವಂತೆ ಮಾಡಿದೆ. ಪ್ರತಿಯೊಬ್ಬರು ಮುಂಜÁಗ್ರತಾ ಕ್ರಮಗಳನ್ನ ವಹಿಸಬೇಕು,ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಬೇಕು ಅಂತ ವೈದ್ಯರು ಸಲಹೆ ನೀಡುತ್ತಿz್ದÁರೆ.

ಬಿಸಿಲಿನ ತಾಪಮಾನ ಹೆಚ್ಚಳವಾಗಿರುವುದರಿಂದ ನವಜÁತ ಶಿಶುಗಳಿಗೆ ಹೆಚ್ಚಿದ ತಾಪಮಾನ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇರುವುದರಿಂದ ಮಕ್ಕಳನ್ನು ಬೆಚ್ಚನೆ ತಾಪಮಾನದಿಂದ ರಕ್ಷಿಸಬೇಕು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಅಂತ ಡಾ. ಮಲ್ಲೇಶ ಗೌಡ ಮಕ್ಕಳ ತಜ್ಞ ರಾಯಚೂರು