ಕನಕಗಿರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಇತ್ತೀಚೆಗೆ ನಿವೃತ್ತರಾದ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಾಗೂ ಪ್ರಾಚಾರ್ಯ ಅನಿಲಕುಮಾರ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ್, ರಾಜಸಾಬ್ ನಂದಾಪುರ, ಚನ್ನಬಸವ ತೆಗ್ಗಿನಮನಿ, ನಾಗರಾಜ ಬಾವಿಕಟ್ಟಿ ಇತರರಿದ್ದರು. 
ಜಿಲ್ಲೆ

ಸಂಯಮ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ

Kopala - Desk - Eraveni

ಕನಕಗಿರಿ: ಶಿಕ್ಷಕ ವೃತ್ತಿಯಿಂದ ದೇಶ ಕಟ್ಟುವ ವಿದ್ಯಾರ್ಥಿಗಳನ್ನು ತಯಾರು ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಗುರುಗಳಾದವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಜಿ.ಅನಿಲಕುಮಾರ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರಾದವರು ಉತ್ತಮ ಬೋಧನೆ ಮಾಡಿದರೆ ವಿದ್ಯಾರ್ಥಿಗಳ ಜತೆಗೆ ಸಮಾಜ ಗೌರವದಿಂದ ಕಾಣುತ್ತದೆ. ಶಿಕ್ಷಕರಾದವರು ಮಕ್ಕಳಿಗೆ ಏನನ್ನೂ ಕೊಡಲು ಸಾಧ್ಯವೋ ಎಲ್ಲ ಸಂಪನ್ಮೂಲವನ್ನು ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಶಿಸ್ತು, ಸಮಯ ಪಾಲನೆ, ಸಂಯಮ, ಪ್ರಾಮಾಣಿಕತೆ ಮೈಗೂಡಿಸಿಕೊಂಡ ಶಿಕ್ಷಕರು ಸಮಾಜದಲ್ಲಿ ಅಚ್ಚಳಿಯದೇ ಉಳಿಯುತ್ತಾರೆ ಎಂದರು.

ಹತ್ತಾರು ವರ್ಷಗಳ ಕಾಲ ಕನಕಗಿರಿಯಲ್ಲಿ ಸೇವೆ ಸಲ್ಲಿಸಿದ್ದರಿಂದ ಜಿಲ್ಲೆ, ರಾಜ್ಯ ಮಟ್ಟದವರೆಗೂ ಬೆಳೆದಿದ್ದೇನೆ. ಸಾವಿರಾರು ವಿದ್ಯಾರ್ಥಿಗಳು ಶಾಲೆ, ಕಾಲೇಜಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಹಳೇ ವಿದ್ಯಾರ್ಥಿಗಳು ಐಪಿಎಸ್, ಕೆಪಿಎಸ್ ಸೇರಿ ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರು ಕಲಿತು ಹೋದ ಈ ಶಾಲೆಗೆ ದೇಣಿಗೆ ರೂಪದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಅಮರೇಶ ದೇವರಾಳ, ಪಪಂ ಸದಸ್ಯ ಶರಣೇಗೌಡ, ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಹಳೇ ವಿದ್ಯಾರ್ಥಿಗಳಾದ ಸಣ್ಣ ಕನಕಪ್ಪ, ರವಿ ಭಜಂತ್ರಿ, ಲಕ್ಷ್ಮೀಕಾಂತ ಬೊಂದಾಡೆ, ಉಪನ್ಯಾಸಕರಾದ ಕಾಳಪ್ಪ ಪತ್ತಾರ, ಪಂಪಾರೆಡ್ಡಿ ಗಚ್ಚಿನಮನಿ, ರವಿ ಪಾಟೀಲ್, ಪ್ರಮುಖರಾದ ಮಹಾಂತೇಶ ಸಜ್ಜನ, ಮಲ್ಲಿಕಾರ್ಜುನಗೌಡ, ಹನುಮೇಶ ಯಲಬುರ್ಗಿ, ಟಿ.ಜೆ ರಾಮಚಂದ್ರ, ಶಿವಪುತ್ರಪ್ಪ ಗಳಪೂಜೆ, ಈಶ್ವರ ಹಲಗಿ, ರೇಖಾ ಚಕ್ರಸಾಲಿ, ದೈಹಿಕ ಶಿಕ್ಷಕ ಶಾಮೀದಸಾಬ ಲಯನ್ದಾರ, ಉದ್ಯಮಿ ಶ್ರೀಕಾಂತ ಗೊಂದಳೆ ಇತರರಿದ್ದರು.