ಹುಬ್ಬಳ್ಳಿ: ಇಲ್ಲಿಯ ನವನಗರದ ಗಣೇಶೋತ್ಸವ ಮಂಡಳಿಯ 45 ನೇ ವರ್ಷದ ಸಂಭ್ರಮಾಚರಣೆಯ 2ನೇ ದಿನದ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದ ಪರಮ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಾಮರಸ್ಯಕ್ಕಾಗಿ ಸಂತರ ನಡಿಗೆ ಕಾರ್ಯಕ್ರಮ ಜರುಗಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಭವಿಷ್ಯದಲ್ಲಿ ಭಾರತವು ಭಾರತವಾಗಿ ಉಳಿಯಬೇಕಾದರೆ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಪ್ರತಿಭೆ ಕೇವಲ ವಿದ್ಯಾಭ್ಯಾಸಕ್ಕಾಗಿ ಪಾಲಕರು ಮಿಸಲಿಡುತ್ತಿದ್ದಾರೆ. ಅದರಿಂದ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆಯಾಗುತ್ತಿದೆ ಎಂದರು.
ಮಂಡಳಿ ಅಧ್ಯಕ್ಷ ಸಚಿನ ಪಾಟೀಲ, ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ, ರಮೇಶ ನಂದ್ಯಾಳ, ಗಿರೀಶ ಸವಡಿಜೋಶಿ, ಬಸಪ್ಪ ಮಾದರ, ವಿಜಯ ಗುಂಟ್ರಾಳ, ಸ್ವಾಮಿ ಮಹಾಜನ ಶೆಟ್ಟರ್, ಹಂಸವೇಣಿ ಉಪಸ್ಥಿತರಿದ್ದರು.