ಜಿಲ್ಲೆ

ಟೆಲಿಗ್ರಾಂ ಆ್ಯಪ್‌ನಲ್ಲಿ 11.15 ಲಕ್ಷ ರೂ. ವಂಚನೆ

ಮಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ರೇಟಿಂಗ್ ಟಾಸ್ಕ್ ನೀಡಿ ಮಹಿಳೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.


ಗಾಯತ್ರಿ ವಂಚನೆಗೊಳಗದವರು. ಫೆ.23ರಂದು ಅವರ ಟೆಲಿಗ್ರಾಂ ನಂಬರ್‌ಗೆ ಲಿಂಕ್ ಮೂಲಕ ಮೆಸೇಜ್ ಬಂದಿತ್ತು. ಅದನ್ನು ತೆರೆದಾಗ ಅವರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಅನಂತರ ಸ್ಟಾರ್ ರೇಟಿಂಗ್ ಎಂಬ ಟಾಸ್ಕ್ ನೀಡಲಾಗಿದ್ದು ಮೊದಲು ಗಾಯತ್ರಿ ಅವರಿಂದ 3,000 ರೂ. ಜಮೆ ಮಾಡಿಸಿದರು. ಅದಕ್ಕೆ ಪ್ರತಿಯಾಗಿ 9,440ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಯಿತು. ಬಳಿಕ ಗ್ರೂಪ್ ಮಚೆರ್ಂಟ್ ಟಾಸ್ಕ್ ಮಿಷನ್ ಪೂರ್ಣಗೊಳಿಸಲು ಹಣ ಪಾವತಿಸುವಂತೆ ತಿಳಿಸಿ ಫೆ.24ರಿಂದ 28ರವರೆಗೆ ಹಂತಹಂತವಾಗಿ ಒಟ್ಟು 11,15,500 ರೂ.ಗಳನ್ನು ವರ್ಗಾಯಿಸಿಕೊಂಡು ಅದಕ್ಕೆ ಪ್ರತಿಯಾಗಿ ಯಾವುದೇ ಹಣ ವಾಪಸ್ ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.