ತೆಲಸಂಗ: ಶುಕ್ರವಾರ ರಾತ್ರಿ ಗ್ರಾಮದಲ್ಲಿ ಸರಣಿಗಳ್ಳತನ ನಡೆದಿದ್ದು, 6 ಮನೆ, ಒಂದು ದೇವಸ್ಥಾನಕ್ಕೆ ಕನ್ನ ಹಾಕಿ ಹಣ, ಚಿನ್ನ, ಬೆಳ್ಳಿ ದೋಚಿದ್ದಾರೆ. ಗ್ರಾಮದ ಹೊರಟ್ಟಿಯಲ್ಲಿ ಗುರುದೇವ ನಿಂಗಪ್ಪ ಜಮಖಂಡಿ ಎಂಬುವರ ಮನೆಯ ಬೀಗ ಮುರಿದು 1ತೊಲ ಚಿನ್ನ, 1 ಮೊಬೈಲ್, 20 ಸಾವಿರ ರೂ. ನಗದು, ಹನುಮಂತ ಜಮಖಂಡಿ ಅವರ ಮನೆಯಲ್ಲಿ 3 ತೊಲ ಚಿನ್ನದ ಸರ, 20 ಸಾವಿರ ರೂ. ನಗದು, ಬಸೀರ್ ಬಾಷಾಸಾಹೇಬ ಅಪರಾಜರ್ ಅವರ ಮನೆಯಲ್ಲಿ 6 ಲಕ್ಷ ರೂ., ಅಕ್ಬರ್ ಕರಜಗಿ ಅವರ ಮನೆಯಲ್ಲಿ 7 ಸಾವಿರ ರೂ. ನಗದು, ಗುರು ಮಾದರ ಮನೆಯಲ್ಲಿ 2 ಲಕ್ಷ ರೂ. ನಗದು ದೋಚಿದ್ದಾರೆ.
ವಿಠ್ಠಲ ದೇವಸ್ಥಾನದಲ್ಲಿ 1 ಕೆಜಿ ಬೆಳ್ಳಿ ಕೀರಿಟ, 1 ತೊಲ ಚಿನ್ನ ಕದ್ದು ಪರಾರಿಯಾಗಿದ್ದಾರೆ. 4 ಜನರ ತಂಡ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಗ್ರಾಮದೊಳಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಬೈಕ್ ಸವಾರನೋರ್ವನ ಮೇಲೆ ಹಲ್ಲೆ ಮಾಡಲೆತ್ನಿಸಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಹಾಗೂ ಐಗಳಿ ಪಿಎಸ್‌ಐ ಶಿವರಾಜ ನಾಯಕವಾಡಿ, ಸಿಸಿ ಕ್ಯಾಮರಾ ದೃಶ್ಯ ಪರೀಶಿಲಿಸಿ, ತನಿಖೆ ಮುಂದುವರಿಸಿದ್ದಾರೆ.