ಜಿಲ್ಲೆ

ಚಿಂಚೋಳಿ; ತೆಲಂಗಾಣ ಚುನಾವಣೆ, ಗಡಿಯಲ್ಲಿನ ಪೊಲೀಸ್​ ಅಧಿಕಾರಿಗಳ ಸಭೆ

ಚಿಂಚೋಳಿ; ನೆರೆಯ ತೆಲಂಗಾಣದಲ್ಲಿ ಡಿಸೆಂಬರ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಶಾಂತಿಯುತ ಎಲೆಕ್ಷನ್​ಗಾಗಿ ತಾಂಡೂರಿನಲ್ಲಿ ಗಡಿ ಪೊಲೀಸ್​ ಅಧಿಕಾರಿಗಳ ಸಭೆ ಭಾನುವಾರ ನಡೆಯಿತು.

ತಾಂಡೂರ ಡಿವೈಎಸ್​ಪಿ ಶೇಖರಗೌಡ ಹಾಗೂ ಚಿಂಚೋಳಿ ಡಿವೈಎಸ್​ಪಿ ಕೆ.ಬಸವರಾಜ ನೇತೃತ್ವದಲ್ಲಿ ಮಹತ್ವದ ಸಭೆ ಜರುಗಿತು.

ಚಿಂಚೋಳಿ, ಸೇಡಂ ಸರಹದ್ದಿನಲ್ಲಿ ನಾಕಾಬಂದಿ ಅಳವಡಿಸಬೇಕು. ಹಣ, ಹೆಂಡ, ಇತ್ಯಾದಿ ಕಾನೂನು ಬಾಹಿರವಾಗಿ ನುಸುಳದಂತೆ ಕಟ್ಟೆಚ್ಚರ ವಹಿಸಬೇಕು. ಒಂದು ವೇಳೆ ಅನುಮಾನಾಸ್ಪದ ವಾಹನ ಕಂಡು ಬಂದರೆ ತಡೆದು ತಪಾಸಣೆಗೆ ಮುಂದಾಗಿ, ಮಾಹಿತಿ ವಿನಿಯೋಗ ಮಾಡುವ ಮೂಲಕ ತೆಲಂಗಾಣ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ನಂತರ ವಿವಿಧ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಯಿತು. ತಾಂಡೂರ ಸಿಪಿಐ ರಾಮಬಾಬು, ಸೇಡಂ ಸಿಪಿಐ ಪಂಚಾಕ್ಷರಯ್ಯ ಸ್ವಾಮಿ, ಪಿಎಸ್ಐ ರಾಜೇಂದ್ರ ರೆಡ್ಡಿ, ಮಿರಿಯಾಣ ಠಾಣೆ ಪಿಎಸ್ಐ ಎ.ಎಸ್.ಪಟೇಲ್, ಸುಲೇಪೇಟ ಠಾಣೆ ಪಿಎಸ್ಐ ನಂದಿನಿ, ಸೇಡಂ ಪಿಎಸ್ಐ ಮಂಜುನಾಥ ರೆಡ್ಡಿ, ಮುಧೋಳ ಪಿಎಸ್ಐ, ತೆಲಂಗಾಣ ಪಿಎಸ್ಐ ವೇನು, ಕಾಶಿನಾಥ್, ಅರವಿಂದ, ವಿಮಲ್​ ಇತರರಿದ್ದರು.