ಹನೂರಿನ ತಹಸೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಗುರುಪ್ರಸಾದ್, ನಾಗೇಂದ್ರ, ಶೇಷಣ್ಣ, ವಾಸುದೇವ, ಸಿದ್ದರಾಜು ಇತರರು ಇದ್ದರು. 
ಜಿಲ್ಲೆ

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್

ಲೋಕೇಶ್ ಮನು. ಡಿ

ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.


ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರೃಕ್ಕಾಗಿ ಹಲವು ಮಹನೀಯರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಸ್ವಾತಂತ್ರೃ ದಿನ ಆಚರಣೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಧೈರ್ಯ, ಸಾಹಸ ಹಾಗೂ ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸಿ ಕೊಡುವುದಾಗಿದೆ ಎಂದು ತಿಳಿಸಿದರು.\

ಶಿರಸ್ತೇದಾರ್‌ರಾದ ನಾಗೇಂದ್ರ, ವಿರೂಪಾಕ್ಷ, ಮಹದೇವನಾಯ್ಕ, ಗ್ರಾಮ ಆಡಳಿತ ಅಧಿಕಾರಿಗಳಾದ ಶೇಷಣ್ಣ, ವಾಸುದೇವ, ರಮೇಶ್, ಕಾವ್ಯಾ, ವಿಜಯಾ, ಮಹೇಶ್ವರಿ, ಸಿಬ್ಬಂದಿ ಸಿದ್ದರಾಜು, ಶೇಖರ್, ಕುಮಾರ್, ಲೋಕೇಶ್ ಇದ್ದರು.