ಹನುಮಸಾಗರ ಸಮೀಪದ ರಂಗಾಪೂರ ಕ್ರಾಸ್ ಬಳಿ ಅಪಘಾತಕ್ಕೀಡಾದ ಮಹಿಳೆಯನ್ನು ಕುಷ್ಟಗಿ ತಹಸೀಲ್ದಾರ್ ಶ್ರುತಿ ಮಲ್ಲಪ್ಪಗೌಡ್ರ ಹನುಮನಾಳ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಉಪ ತಹಸೀಲ್ದಾರ್ ಆಂಜನೇಯ ಮೊಸರಕಲ್, ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್ ಮದ್ದಲಗಟ್ಟಿ ಇತರರಿದ್ದರು. 
ಜಿಲ್ಲೆ

ಗಾಯಾಳು ಆಸ್ಪತ್ರೆಗೆ ಸೇರಿಸಿದ ತಹಸೀಲ್ದಾರ್ ಶ್ರುತಿ ಮಲ್ಲಪ್ಪಗೌಡ್ರ

ಹನುಮಸಾಗರ: ಸಮೀಪದ ರಂಗಾಪೂರ ಕ್ರಾಸ್ ಬಳಿ ಅಪಘಾತಕ್ಕೀಡಾದ ಮಹಿಳೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿ ಕುಷ್ಟಗಿ ತಹಸೀಲ್ದಾರ್ ಶ್ರುತಿ ಮಲ್ಲಪ್ಪಗೌಡ್ರ ಮಾನವೀಯತೆ ಮೆರೆದಿದ್ದಾರೆ.

ತಹಸೀಲ್ದಾರ್ ಶ್ರುತಿ, ಗುರುವಾರ ಸಂಜೆ ಕುಷ್ಟಗಿ ತಾಲೂಕಿನ ಗಡಿ ಗ್ರಾಮ ರಾಂಪೂರದಿಂದ ಬರುತ್ತಿದ್ದರು. ಆಗ ರಂಗಾಪೂರ ಕ್ರಾಸ್ ಬಳಿ ಬೈಕ್‌ಗೆ ನಾಯಿ ಅಡ್ಡ ಬಂದಿದ್ದರಿಂದ ಬೈಕ್‌ನಲ್ಲಿದ್ದ 60 ವರ್ಷದ ಶಿವಬಾವಿ ಕನಕಪ್ಪ ರಾಮಸ್ವಾಮಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇದನ್ನು ಗಮನಿಸಿದ ತಹಸೀಲ್ದಾರ್, ಗಾಯಳು ಮಹಿಳೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಹನುಮನಾಳ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಆಂಜನೇಯ ಮೊಸರಕಲ್, ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್ ಮದ್ದಲಗಟ್ಟಿ ಇತರರಿದ್ದರು.