ಜಿಲ್ಲೆ

ದಾಂಡೇಲಿಯಲ್ಲಿ ತಹಸೀಲ್ದಾರ್ ಕಚೇರಿ ಮುತ್ತಿಗೆ

ಬಸವರಾಜ ವೀರಪ್ಪ ಗರಗ

ದಾಂಡೇಲಿ: ರೈತರ ಜಮೀನಿನಲ್ಲಿ ಪಹಣಿಗಳು ವಕ್ಪ್ ಆಸ್ತಿಗಳಾಗಿ ದಾಖಲಾಗಿರುವ ಕುರಿತು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವುದನ್ನು ವಿರೋಧಿಸಿ ನ. 4ರಂದು ದಾಂಡೇಲಿ ತಹಸೀಲ್ದಾರ್ ಕಚೇರಿಗೆ ಬಿಜೆಪಿ ಪಕ್ಷದ ಮುಖಂಡರೊಂದಿಗೆ ರೈತರು ಸಾರ್ವಜನಿಕರು ಸೇರಿ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಎಚ್ಚರಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಪಹಣಿಯಲ್ಲಿ ನಿಮ್ಮ ಆಸ್ತಿಯೇ ನಿಮ್ಮ ಆಸ್ತಿಗೆ ಹೆಸರಿದೆ ಎಂದು ಪರೀಕ್ಷಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ರೈತರಿಗೆ ತಿಳಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ, ಸರ್ಕಾರಿ ಕಟ್ಟಡಗಳು ವಕ್ಪ್ ಆಸ್ತಿಯೇ? ಎಂದು ಪ್ರಶ್ನಿಸಿದರು.

ತಹಸೀಲ್ದಾರ್ ಕಚೇರಿ ಎದುರು ರಾಜ್ಯದ ರೈತರ ಆಸ್ತಿ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಹೊರತು ರಾಜಕೀಯ ಉದ್ದೇಶದಿಂದಲ್ಲ ಎಂದರು. ಬುದುವಂತ ಗೌಡ ಪಾಟೀಲ, ಗಿರೀಶ ಟೀಸೂರು, ಮಿಥುನ ನಾಯಕ, ಗುರು ಮಠಪತಿ, ಪ್ರಶಾಂತ ಬಾಸೂತಕರ, ಅನ್ನಪೂರ್ಣ ಬಾಗಲಕೋಟ, ಉಮಾ ಹನಮಸಾಗರ, ಅಪಾರ ಕಾಂಬಳೆ, ಕೃಷ್ಣಾ ಕೊಕರೆ, ರೋಶನ್ ನೇತ್ರಾವಳಿ, ಚನ್ನಬಸಪ್ಪ ಮುರುಗೋಡ, ವಿಜಯ ಕೋಲೆಕರ, ಪದ್ಮಜಾ ಜನ್ನು, ರಮಾ ರವಿಂದ್ರ, ಜಾನು ತೋರವಥ್, ಶೋಭಾ ಜಾದವ್, ಸುಧಾಕರ ರೆಡ್ಡಿ, ಜೊಯಿಡಾ ತಾಲೂಕು ಘಟಕದ ಅಧ್ಯಕ್ಷ ಶಿವಾಜಿ ಗೋಸಾವಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಗಿರೀಶ್ ಗೋಸಾವಿ, ಉಪಾಧ್ಯಕ್ಷ ಗುರಪ್ಪ ಹಣಬರ, ಇತರರಿದ್ದರು.