ತಾವರಗೇರಾದಲ್ಲಿ ಪಟಾಕಿ ಮಾರಾಟ ಮಾಡುವ ಅಂಗಡಿಗಳನ್ನು ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಪರಿಶೀಲಿಸಿದರು. ಪಿಎಸ್‌ಐ ನಾಗರಾಜ್, ಪಪಂ ಮುಖ್ಯಾಧಿಕಾರಿನಬಿಸಾಬ ಖುದನವರ, ಪ್ರಮುಖರಾದ ಶರಣಬಸವೇಶ , ಸೂರ್ಯ ಕಾಂತ ಇದ್ದರು. 
ಜಿಲ್ಲೆ

ಹಸಿರು ಪಟಾಕಿ ಮಾರಾಟ ಮಾಡಿ

ತಾವರಗೇರಾ: ದೀಪಾವಳಿ ಹಬ್ಬದ ಪ್ರಯುಕ್ತ ತಾವರಗೇರಾ ಪಟ್ಟಣದಲ್ಲಿನ ಪಟಾಕಿ ಮಾರಾಟ ಮಾಡುವ ಅಂಗಡಿಗಳನ್ನು ಕುಷ್ಟಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಶುಕ್ರವಾರ ಪರಿಶೀಲಿಸಿದರು.

ಪರವಾನಗಿ ಪಡೆಯದೇ ಪಟಾಕಿ ಮಾರಾಟ ಮಾಡುವಂತಿಲ್ಲ

ಅಂಗಡಿ ಮಾಲೀಕರು ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು. ಪರಿಸರಕ್ಕೆ ಹಾನಿ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಅಲ್ಲದೇ ಪರವಾನಗಿ ಪಡೆಯದೇ ಪಟಾಕಿ ಮಾರಾಟ ಮಾಡುವಂತಿಲ್ಲ. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಎಚ್ಚರಿಸಿದರು.

ಪಿಎಸ್‌ಐ ನಾಗರಾಜ್ ಕೋಟಗಿ, ನಾಡ ತಹಸೀಲ್ದಾರ್ ಶರಣಬಸವೇಶ , ಪಪಂ ಮುಖ್ಯಾಧಿಕಾರಿ ನಬಿಸಾಬ ಖುದನವರ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ, ಪ್ರಮುಖರಾದ ಸೂರ್ಯಕಾಂತ , ಶ್ಯಾಮೂರ್ತಿ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಇದ್ದರು.