ಕೂಡ್ಲಿಗಿಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ವೈ. ರವಿಕುಮಾರ್, ಬಿಸಿಎಂ ಅಧಿಕಾರಿ ಪಂಪಾಪತಿ, ನಿಲಯ ಪಾಲಕರಾದ ಸಿರಬಿ ಅಂಜಿನಪ್ಪ, ಹುಲುಗಪ್ಪ, ಚಲುವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಮಾರಪ್ಪ ಇನ್ನಿತರರಿದ್ದರು.  
ಜಿಲ್ಲೆ

ಅರಸು ಜಯಂತಿ ಅರ್ಥಪೂರ್ಣವಾಗಿ ಆಚರಣೆ

ಪ್ರವೀಣ ಉದುಸಾ ದಲಬಂಜನ್

ಕೂಡ್ಲಿಗಿ: ಆ.20 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ್ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.

ಅಲಂಕೃತ ವಾಹನದಲ್ಲಿ ಭಾವಚಿತ್ರ ಮೆರವಣಿಗೆ

ಪಟ್ಟಣದ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಅಂದು ಬೆಳಗ್ಗೆ 9 ಗಂಟೆಗೆ ಕೊತ್ತಲ ಆಂಜನೇಯ ದೇವಸ್ಥಾನದಿಂದ ಅಲಂಕೃತ ವಾಹನದಲ್ಲಿ ದೇವರಾಜ ಅರಸು ಭಾವಚಿತ್ರದೊಂದಿಗೆ ವಾದ್ಯ, ಮೇಳಗಳೊಂದಿಗೆ ಮೆರವಣಿಗೆಯನ್ನು ಪ್ರವಾಸಿ ಮಂದಿರದವರೆಗೆ ಮಾಡಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಜಯಂತಿ ಅಂಗವಾಗಿ ಭಾಷಣ , ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ದೇವರಾಜ ಅರಸು ಅವರ ಕುರಿತು ಮುಖ್ಯ ಭಾಷಣಕಾರರನ್ನು ಕರೆ ತರಲು ನಿರ್ಧಾರ ಮಾಡಲಾಗಿದೆ ಎಂದರು.

ತಾಪಂ ಇಒ ವೈ. ರವಿಕುಮಾರ್, ಬಿಸಿಎಂ ತಾಲೂಕು ಅಧಿಕಾರಿ ಪಂಪಾಪತಿ, ನಿಲಯ ಪಾಲಕರಾದ ಸಿರಬಿ ಅಂಜಿನಪ್ಪ , ಕುಮಾರಸ್ವಾಮಿ, ಎಸ್ಟಿ ಇಲಾಖೆ ಅಧಿಕಾರಿ ಮೆಹಬೂಬ್ ಭಾಷಾ, ಸಿಡಿಪಿಒ ನಾಗನಗೌಡ ಪಾಟೀಲ, ಪಪಂ ಮುಖ್ಯಾಧಿಕಾರಿ ಫಕೃದ್ದಿನ್, ಚಲುವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಮಾರಪ್ಪ ಇನ್ನಿತರರಿದ್ದರು.