ದೇವದುರ್ಗದ ಮಿನಿವಿಧಾನಸೌಧದಲ್ಲಿ ಬುಧವಾರ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಕೆ.ವೈ.ಬಿದರಿ, ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಶಿರಸ್ತೇದಾರ್ ಗೋವಿಂದ್, ಸಿಬ್ಬಂದಿ ಶರಣಬಸವಸ್ವಾಮಿ, ಅನಿಲ್‌ಕುಮಾರ, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಶಿವರಾಜ ಇತರರಿದ್ದರು. 
ಜಿಲ್ಲೆ

ಬಾಬು ಜಗಜೀವನ ರಾಮ್ ಆದರ್ಶ ರಾಜಕಾರಣಿ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಹಸಿರುಕ್ರಾಂತಿಯ ಹರಿಕಾರ ಆಗಿದ್ದಾರೆ ಎಂದು ತಹಸೀಲ್ದಾರ್ ಕೆ.ವೈ.ಬಿದರಿ ಹೇಳಿದರು.


ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಪ್ರತಿಯೊಬ್ಬರಿಗೂ ಜಗಜೀವನರಾಮ್ ಜೀವನ ಮಾದರಿಯಾಗಿದೆ. ಅವರೊಬ್ಬ ಆದರ್ಶ ರಾಜಕಾರಣಿಯಾಗಿದ್ದರು. ಬಾಬೂಜಿ ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಪರಿಶ್ರಮದ ಮೂಲಕ ಉಪಪ್ರಧಾನಿ ಸ್ಥಾನಕ್ಕೆ ಏರಿದ್ದರು ಎಂದರು.


ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಜಗಜೀವನ್‌ರಾಮ್ ಅವರ ಅಧಿಕಾರವಧಿಯಲ್ಲಿ ಹಸಿರು ಕ್ರಾಂತಿಯಿಂದ ದೇಶದ ಆಹಾರ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು ಎಂದರು.


ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಶಿರಸ್ತೇದಾರ್ ಗೋವಿಂದ್, ಸಿಬ್ಬಂದಿ ಶರಣಬಸವಸ್ವಾಮಿ, ಅನಿಲ್ ಕುಮಾರ, ರವಿಕುಮಾರ, ದೇವರಾಜ, ಶಾಂತಮಲ್ಲಯ್ಯ ಸ್ವಾಮಿ, ಪ್ರಮುಖರಾದ ಹನುಮಂತ ಮನ್ನಾಪುರ, ಭೀಮಣ್ಣ ನಾಯಕ, ಅಭಿಷೇಕ ಇತರರಿದ್ದರು.