ಸಿಂಧನೂರಿನ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್‌ಗೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ತಾಲೂಕು ಸಮಿತಿ ಬುಧವಾರ ಮನವಿ ಸಲ್ಲಿಸಿತು. ಸಂಘದ ಗೌರವಾಧ್ಯಕ್ಷ ಎಂ.ಮರಿಲಿಂಗಪ್ಪ, ಅಧ್ಯಕ್ಷ ವಿಶ್ವನಾಥ ಪಾಟೀಲ್, ಉಪಾಧ್ಯಕ್ಷ ಡಾ.ಮದಗಪ್ಪ, ಕಾರ್ಯದರ್ಶಿ ರಾಮಣ್ಣ ಹಿರೇಬೇರ‌್ಗಿ, ಖಜಾಂಚಿ ನರಸಣ್ಣ ಇದ್ದರು. 
ಜಿಲ್ಲೆ

ಯುಜಿಸಿ ನಿಯಮದಂತೆ ವೇತನ ನೀಡಿ

ಸಿಂಧನೂರು: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ತಾಲೂಕು ಸಮಿತಿ ನಗರದ ತಹಸಿಲ್ ಕಚೇರಿ ಶಿರಸ್ತೇದಾಸ್ ಅಂಬಾದಾಸ್‌ಗೆ ಬುಧವಾರ ಮನವಿ ಸಲ್ಲಿಸಿತು.

ಪದವಿ ಕಾಲೇಜುಗಳಲ್ಲಿ ಶೇ.90 ರಷ್ಟು ಅತಿಥಿ ಉಪನ್ಯಾಸರು

ರಾಜ್ಯದ 436 ಸರ್ಕಾರಿ ರಿಂದ ನಡೆಯುತ್ತಿವೆ. ಕಳೆದ 15-20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಕರು ಯುಜಿಸಿ ನಿಯಮದಂತೆ ಎಲ್ಲ ಅರ್ಹತೆಯೂ ಹೊಂದಿದ್ದಾರೆ. ಕೂಡಲೇ ವೇತನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಬಾಕಿ ವೇತನ ಬಿಡುಗಡೆಗೊಳಿಸಿ

ಈಗಾಗಲೇ ಸಾಕಷ್ಟು ಅತಿಥಿ ಉಪನ್ಯಾಸಕರು ಸೇವಾ ವಯೋಮಿತಿಯನ್ನು ಮೀರಿದ್ದಾರೆ. ಕೆಲ ಜನ ಕರ್ತವ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರ ಸೇವೆಯನ್ನು ಖಾಯಂ ಮಾಡಿದರೆ ಅದೊಂದು ಐತಿಹಾಸಿಕ ನಿರ್ಧಾರವಾಗಲಿದೆ. ಕಳೆದ ಮೂರು ತಿಂಗಳಿಂದಲೂ ವೇತನವು ಬಿಡುಗಡೆ ಮಾಡಿಲ್ಲ. ಕೂಡಲೇ ಬಾಕಿ ಇರುವ ವೇತನ ಬಿಡುಗಡೆಗೊಳಿಸಬೇಕು. ಆರೋಗ್ಯ ವಿಮೆ ಮತ್ತು ಭವಿಷ್ಯ ನಿಧಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಎಂ.ಮರಿಲಿಂಗಪ್ಪ, ಅಧ್ಯಕ್ಷ ವಿಶ್ವನಾಥ ಪಾಟೀಲ್, ಉಪಾಧ್ಯಕ್ಷ ಡಾ.ಮದಗಪ್ಪ, ಕಾರ್ಯದರ್ಶಿ ರಾಮಣ್ಣ ಹಿರೇಬೇರ‌್ಗಿ, ಖಜಾಂಚಿ ನರಸಣ್ಣ, ಅತಿಥಿ ಉಪನ್ಯಾಸಕರಾದ ಡಾ.ಬಸವರಾಜ ನಾಯಕ, ವಿಜಯಲಕ್ಷ್ಮೀ ಗುರಿಕಾರ, ಮಲ್ಲಯ್ಯ, ನಾರಾಯಣ ಬೆಳಗುರ್ಕಿ, ಶಂಕರ ಗುರಿಕಾರ ಇದ್ದರು.