ಜಿಲ್ಲೆ

ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಬೇಕು

ಎಂ.ಎಸ್​.ಹಿರೇಮಠ ಬೆಳಗಾವಿ

ಬೈಲಹೊಂಗಲ: ವಿದ್ಯಾರ್ಥಿಗಳು ಏನಾದರೂ ಸಾಧನೆ ಮಾಡಿದ್ದಾರೆ ಎಂದರೆ ಅದು ಅವರ ಪಾಲಕರ ಹಾಗೂ ಶಿಕ್ಷಕರ ಪರಿಶ್ರಮದ ಲವಾಗಿದೆ ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಬೈಲವಾಡ ಗ್ರಾಮದ ಶ್ರೀ ಸಿದ್ದಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 20ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನ ಸದುಪಯೋಗ ಮಾಡಿಕೊಂಡು ದೇಶಕ್ಕೆ ಕೀರ್ತಿ ತರಬೇಕು ಎಂದರು.

ಶಾಸಕ ಮಹಾಂತೇಶ ಕೌಜಲಗಿ, ಸಂಸ್ಥೆಯ ಅಧ್ಯಕ್ಷ ಎಂ.ಸಿ. ಪಾಟೀಲ ಮಾತನಾಡಿ, ಸಿದ್ಧಬಸವೇಶ್ವರ ಶಿಕ್ಷಣ ಸಂಸ್ಥೆಯು ಉತ್ತಮ ಲಿತಾಂಶ ನೀಡುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಪ್ರಾಥಮಿಕ ಹಂತವು ಮೈಲುಗಲ್ಲಾಗಿರುತ್ತದೆ ಎಂದರು.

ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಬೋಳಗೌಡರ ಮಾತನಾಡಿ, 20 ವರ್ಷಗಳ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ ಇಂದು ನೂರಾರು ಮಕ್ಕಳಿಗೆ ವಿದ್ಯಾ ಮಂದಿರವಾಗಿ ಬೆಳೆದಿದೆ ಎಂದರು. ಶಿಕ್ಷಕ ಪ್ರಕಾಶ

ಮಾಸ್ತಿಹೊಳಿ ಪ್ರಾಸ್ತಾವಿಕ ಮಾತನಾಡಿದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಹುಚ್ಚನವರ, ಎಸ್.ಬಿ.ಬಂಡಗಿ, ಎಂ.ಬಿ. ಗಿಡಗೇರಿ, ವಿಶಾಲ ಹೊಸಮಠ, ಆರ್ಷದ ಜಮಾದಾರ, ಸತ್ಯಪ್ಪ ದೇಶನೂರ, ಜಾವೇದ ಕಿತ್ತೂರ, ನಾಗಪ್ಪ ಬೋಳಗೌಡ್ರ, ಶಿವನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಎಂ.ಸಿ. ಶಿವನಾಯ್ಕರ ವಾರ್ಷಿಕ ವರದಿ ಓದಿದರು. ವಿ.ಬಿ.ಗೀರನವರ,ಬಿ.ವಿ. ದೇಮಟ್ಟಿ, ಪತ್ರಕರ್ತರಾದ ಮಹಾಂತೇಶ ರಾಜಗೋಳಿ, ಈಶ್ವರ ಶಿಲ್ಲೇದಾರ ಇದ್ದರು. ಸಂಸ್ಥೆಯ ನಿರ್ದೇಶಕ ಎಸ್.ಬಿ. ಸಂಪಗಾವ ಸ್ವಾಗತಿಸಿದರು. ಶಿಕ್ಷಕಿ ಆರ್.ಎಂ. ಸಯ್ಯದ ನಿರೂಪಿಸಿದರು.

ಮುಖ್ಯಾಧ್ಯಾಪಕ ಎಸ್.ಬಿ. ಬಂಡಗಿ ವಂದಿಸಿದರು.